Site icon PowerTV

ಖಾಕಿ ಚಡ್ಡಿ ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ..? : ಬಿಕೆ ಹರಿಪ್ರಸಾದ್

ಕಾರವಾರ : ಖಾಕಿ ಚಡ್ಡಿ ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಕುಮಟಾದ ಗಿಬ್ ಮೈದಾನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಛಪ್ಪನ್ ಇಂಚ್ ಕಾ ಛಾತಿ ಹೊಂದಿರುವ ಮೋದಿಗೆ ಒಂದು ದಿನ ಚೀನಾ ಎಂದು ಹೇಳಲಿ. ಚೀನಾ ಎಂದು ಹೇಳಲು ಅವರಿಗೆ ಧೈರ್ಯವಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಹೇಳಲಿ. ಕರ್ನಾಟಕದಲ್ಲಿ 20 ಡ್ಯಾಂ ಕಾಂಗ್ರೆಸ್ ಕಟ್ಟಿದ್ರೆ, ಬಿಜೆಪಿ ಒಂದು ಕೆರೆನೂ ಕಟ್ಟಿಸಿಲ್ಲ ಎಲ್ಲಾ‌‌ ಜಾಗವನ್ನು ಬಿಜೆಪಿಯವರು ನುಂಗಿ ಹಾಕಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ, ಬಿಜೆಪಿ ಲೂಟಿ ಸರಕಾರ, ವೈಪಲ್ಯ ಮುಚ್ಚಿಸಲು ಧರ್ಮದ ನಡುವೆ ಬಿರುಕು ಮೂಡಿಸ್ತಾರೆ. ದೇಶದ ಪ್ರಪ್ರಥಮ ಉಗ್ರವಾದಿ ನಾಥೋರಾಮ್ ಗೋಡ್ಸೆ ಗಾಂದಿಯನ್ನು ಕೊಂದ. ಬಾಬರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸಿದ್ರು. ಆದರೆ, ಬಿಜೆಪಿಯವರು ಯಾರೂ ಪ್ರಾಣ ತ್ಯಾಗ ಮಾಡಿಲ್ಲ. ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದ್ರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸ್ತಿದ್ದಾರೆ. ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡಲಾಗುತ್ತಿದೆ. ಹೆಡಗೇವಾರ್ ಅವರನ್ನು ಪಠ್ಯದಲ್ಲಿ ಸೇರಿಸಿ, ನಾರಾಯಣ ಗುರು, ಕುವೆಂಪು ಅವರನ್ನು ಬಿಟ್ಟಿದ್ದಾರೆ. ನಿಮ್ಮ ಮಕ್ಕಳು ಜೈಲಿಗೆ ಹೋಗ್ಬೇಕಾದ್ರೆ ಬಿಜೆಪಿಗೆ ಹೋಗಿ ಬಿಜೆಪಿಯವರು ತಲವಾರು, ಪಿಸ್ತೂಲು ಎಲ್ಲಾ ಕೊಡ್ತಾರೆ. ಒಳ್ಳೆಯ ವಿದ್ಯಾಭ್ಯಾಸ ಪಡೆಯಬೇಕಂದ್ರೆ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದರು.

Exit mobile version