Site icon PowerTV

ಬ್ರಿಗೇಡ್​ ರಸ್ತೆ ಶಾಪಿಂಗ್​ ಕಾಂಪ್ಲೆಕ್ಸ್​ ಮೇಲಿಂದ ಬಿದ್ದು ಯುವತಿ ಸಾವು

ಬೆಂಗಳೂರು: ಶಾಪಿಂಗ್ ಮಾಡಲು ಮಾಲ್ ಗೆ ಹೋಗಿ ಶಾಪಿಂಗ್ ಮುಗಿಸಿ ಮನೆಗೆ ಹೋಗಬೇಕು ಅನ್ನೋದ್ರಲ್ಲಿ ಆ ಯುವತಿ ಎರಡನೇ ಮಹಡಿಯಿಂದ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ಬ್ರೀಗೇಡ್ ರೋಡ್​ನಲ್ಲಿ ನಡೆದಿದೆ.

ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡ್ತಿರುವ ಇವರಿಬ್ಬರೂ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಬ್ರೀಗೇಡ್ ರೋಡ್‌ನಲ್ಲಿರೋ 5 ಅವೆನ್ಯೂ ಶಾಪಿಂಗ್ ಮಾಲ್‌ಗೆ ಬಂದಿದ್ದಾರೆ. ಎರಡನೇ ಮಹಡಿಯಲ್ಲಿ ಶಾಪಿಂಗ್ ಮಾಡಿದ್ದ ಇವರಿಬ್ಬರೂ ಇದೇ ವಿಂಡೋ ಪಕ್ಕದಲ್ಲೇ ಕೂತಿದ್ರು. ಆದ್ರೆ, ಅಲ್ಲಿ ಏನಾಯಿತೋ ಏನೋ ಗ್ಲಾಸ್‌ಗೆ ಒರಗಿಕೊಂಡಿದ್ದ ಲಿಯಾ ನೋಡ ನೋಡುತ್ತಿದ್ದಂತೆ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ.

ಮೂಲತಹ ಆಂಧ್ರ ಮೂಲದ ಲಿಯಾ, ಫ್ರೇಜರ್ ಟೌನ್‌ನಲ್ಲಿ ವಾಸವಾಗಿದ್ಲು. ಇನ್ನು ಸ್ಥಳಕ್ಕೆ ಬಂದ ಕಬ್ಬನ್‌ಪಾರ್ಕ್ ಹಾಗೂ ಆಶೋಕ್ ನಗರ ಪೊಲೀಸರು ಯುವಕ, ಯುವತಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವ ಆಗಿದ್ದರಿಂದ ಲಿಯಾ ಸಾವನ್ನಪ್ಪಿದ್ರೆ, ಕ್ರಿಸ್ಟಲ್‌ಗೆ ಗಂಭೀರ ಗಾಯಗಳಾಗಿವೆ.

ಸದ್ಯ ಕಬ್ಬನ್‌ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮಾಡ್ತಾ ಇದಾರೆ. ಗಾಯಗೊಂಡಿರುವ ಯುವಕ, ಸಾವಿಗೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿಲ್ಲ. ಅಲ್ಲದೆ ಆಕೆ ನನ್ನ ಸ್ನೇಹಿತೆ, ಲವರ್ ಅಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾನೆ. ಆದರೆ, ಯುವತಿ ವಿಂಡೋ‌ ಗ್ಲಾಸ್ ಒಡೆದು ಜಾರಿಯೇ ಬಿದ್ಲಾ ? ಅಥವಾ ಬೇರೆ ಏನಾದರೂ ಕಾರಣ ಇದೆಯಾ ಅನ್ನೋದ್ರ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.

Exit mobile version