Site icon PowerTV

ಸರಣಿ ಸೋಲಿನ ಬಗ್ಗೆ ಮೌನ ಮುರಿದ ಪೂಜಾ

ಬಹುಭಾಷಾ ನಟಿ ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೂಜಾ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಆದರೂ ಸಿನಿಮಾಗಳ ಆಫರ್ ಕಮ್ಮಿಯಾಗಿಲ್ಲ. ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಪೂಜಾ ಹೆಗ್ಡೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ಸದ್ಯ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ಕಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪೂಜಾ ಸಾಲು ಸಾಲು ಸೋಲಿನ ಸುಳಿಗೆ ಸಿಲುಕಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು. ಇದೀಗ ಮೊದಲ ಬಾರಿಗೆ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇದು ಒಂದು ರೀತಿ ಗೇಮ್. ನಾನು ಆರು ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿದ್ದೀನಿ. ಅದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಏಕೆಂದರೆ ಅದು ತುಂಬಾ ಅಪರೂಪ. ಸತತವಾಗಿ 6 ಹಿಟ್ ಸಿನಿಮಾ ನೀಡುವುದು ಅಸಾಧಾರಣ. ಪ್ರತಿಚಿತ್ರಕ್ಕೂ ಅದರದ್ದೇ ಆದ ಹಣೆಬರಹ ಇದೆ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಾನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ರೆ ಫ್ಲಾಪ್ ಸಿನಿಮಾಗಳನ್ನು ಸಹ ಹಾಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Exit mobile version