Site icon PowerTV

ಮೈದುಂಬಿ ಹರಿಯುತ್ತಿದೆ ಸುವರ್ಣಮುಖಿ ನದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಜಲಮೂಲಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಹಿರಿಯೂರು ತಾಲ್ಲೂಕಿನ ಸುವರ್ಣಮುಖಿ ನದಿ ಮೈದುಂಬಿ ಹರಿಯುತ್ತಿದೆ. ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ಸುವರ್ಣಮುಖಿ ನದಿ ಬೋರ್ಗರೆಯುತ್ತಿದೆ.

ಮುಂಗಾರಿಗೂ ಮುನ್ನವೇ ಬ್ಯಾರೇಜ್, ಚೆಕ್ ಡ್ಯಾಂ ಭರ್ತಿಯಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮೀಪದ ಸೀಗೆಹಳ್ಳಿ-ಅಳಗವಾಡಿ ಹಳ್ಳ ತುಂಬಿ ಹರಿದಿದೆ.ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ಕೆರೆ, ಕಟ್ಟೆ, ಜಲಮೂಲಗಳು ಭರ್ತಿಯಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಹರ್ಷಗೊಂಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಪಿಳ್ಳೆಕೇರನಹಳ್ಳಿಯ ಸರ್ಕಾರಿ ಶಾಲೆ ಆವರಣ ಜಲಾವೃತಗೊಂಡಿದೆ. ಮಲ್ಲಾಪುರ ಕೆರೆಯ ನೀರು ಶಾಲೆಗೆ ನುಗ್ಗಿದ್ದು, ಆವರಣದಲ್ಲಿರುವ ಎರಡು ಮರಗಳು ನೆಲಕ್ಕುರುಳಿರುಳಿವೆ.

Exit mobile version