Site icon PowerTV

ಚೇತನಾ ರಾಜ್ ಸಾವಿಗೆ ರಾಖಿ ಸಾವಂತ್ ಆಘಾತ

ಚೇತನಾ ರಾಜ್ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ರಾಖಿ ಸಾವಂತ್ ವಿಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಜೊತೆಗೆ ಚೇತನಾ ರಾಜ್ ಸಾವಿಗೆ ಕಾರಣವಾದ ಆಸ್ಪತ್ರೆ ಮತ್ತು ವೈದ್ಯರ ಬಗ್ಗೆ ರಾಖಿ ಸಾವಂತ್ ಕಿಡಿಕಾರಿದ್ದಾರೆ.

ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಕನ್ನಡ ನಟಿ ಚೇತನಾ ರಾಜ್ ಸಾವನ್ನಪ್ಪಿದ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಚೇತನಾ ರಾಜ್ ಸಾವಿಗೆ ಕಾರಣವಾದ ಆಸ್ಪತ್ರೆ ಯಾವುದು, ವೈದ್ಯರು ಯಾರು ಅಂತ ನಾನು ತಿಳಿದುಕೊಳ್ಳಬೇಕು ಎಂದರು.

ಅದುವಲ್ಲದೇ, ಆಕೆಗೆ ಕೇವಲ 21 ವರ್ಷ ವಯಸ್ಸು. ಆಕೆಯ ಜೀವ ತೆಗೆದ ಸರ್ಜರಿ ಯಾವುದು ಎಂಬುದು ನನಗೆ ಗೊತ್ತಾಗಬೇಕು. ಅಸಲಿಗೆ, ಆ ವೈದ್ಯನಿಗೆ ಡಾಕ್ಟರ್ ಡಿಗ್ರಿ ಕೊಟ್ಟವರು ಯಾರು? ಈಗಿನ ಕಾಲದಲ್ಲಿ ಯಾರು ಬೇಕಾದರೂ ಡಾಕ್ಟರ್ ಆಗಬಹುದು. ಯಾರು ಬೇಕಾದರೂ ನರ್ಸ್ ಆಗಬಹುದು. ಯಾರು ಬೇಕಾದರೂ ಪ್ಲಾಸ್ಟಿಕ್ ಸರ್ಜನ್ ಆಗಬಹುದು’’ಸರಿಯಾದ ವೈದ್ಯರು ಬೇಕು ಅಂದ್ರೆ ಬಾಲಿವುಡ್ ಮಂದಿ ಅಥವಾ ನನ್ನನ್ನ ಕೇಳಿ. ಯಾವ ಡಾಕ್ಟರ್ ಬೆಸ್ಟ್ ಅಂತ ನಾವು ಗೈಡ್ ಮಾಡುತ್ತೇವೆ. ಯಾರ್ಯಾರೋ ಮಾತನ್ನ ನಂಬಿ ಆಪರೇಷನ್ ಥಿಯೇಟರ್‌ಗೆ ಹೋಗಬೇಡಿ. ಇದು ಖಂಡಿತ ಸರಿಯಲ್ಲ’’ ಎಂದು ವಿಡಿಯೋದಲ್ಲಿ ರಾಖಿ ಸಾವಂತ್ ಹೇಳಿದ್ದಾರೆ.

Exit mobile version