Site icon PowerTV

ಕಲಬುರಗಿ ಜ್ಞಾನಜ್ಯೋತಿ ಶಾಲೆ ಪುನಾರಂಭ…!

ಕಲಬುರಗಿ : ಪಿಎಸ್​ಐ ನೇಮಕಾತಿ ಪರೀಕ್ಷೆ ಬಳಿಕ ಕಲಬುರಗಿಯ ಜ್ಞಾನಜ್ಯೋತಿ ಶಾಲೆಗೆ ಅಕ್ರಮದ ಸುಳಿ ಸುತ್ತಿಕೊಂಡಿತ್ತು.. ಇಡೀ ರಾಜ್ಯದ ಅಕ್ರಮದ ಕೇಂದ್ರ ಬಿಂದುವಾಗಿದ್ದ ಜ್ಞಾನಜ್ಯೋತಿ ಶಾಲೆಯಲ್ಲಿ ಹಗರಣ ಸಂಬಂಧ 32ಕ್ಕೂ ಅಧಿಕ ಜನರನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆ, ಪುನಾರಂಭ ಆಗುತ್ತೋ..? ಇಲ್ವೋ..? ಅನ್ನೋ ಗೊಂದಲ ಶುರುವಾಗಿತ್ತು. ಶಾಲೆಯ ಮಾಲೀಕರು, ಹೆಡ್‌ಮಾಸ್ಟರ್, ಶಿಕ್ಷಕಿಯರು ಜೈಲುಪಾಲಾಗಿದ್ದಾರೆ. ಆದ್ರೆ, ಎಲ್ಲಾ ಶಾಲೆಗಳಂತೆ ತನ್ನ ಕಾರ್ಯಚಟುವಟಿಕೆಗಳನ್ನ ಶುರು ಮಾಡಿದೆ.

ಅನ್ನಪೂರ್ಣ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ ಅಡಿಯಲ್ಲಿ ಕಳೆದ 12 ವರ್ಷಗಳ ಹಿಂದೆ ಜ್ಞಾನಜ್ಯೋತಿ ಶಾಲೆ ಆರಂಭಗೊಂಡಿತ್ತು. ಗೋಕುಲ ಬಡಾವಣೆ ಅಲ್ಲದೇ ಸಾಕಷ್ಟು ಮಕ್ಕಳಿಗೆ ಜ್ಞಾನಕೇಂದ್ರವಾಗಿದೆ. ಈ ಶಾಲೆ ಆಂಗ್ಲ ಮಾಧ್ಯಮದಲ್ಲೇ ಇರೋದ್ರಿಂದ ಹಾಗೂ ಶುಲ್ಕ ಸೇರಿದಂತೆ ಇನ್ನಿತರ ವಿಚಾರದಲ್ಲಿ ಪೋಷಕರ ಪರ ನೀತಿ ಅಳವಡಿಸಿಕೊಳ್ಳಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನ ಕೂಡ ಈ ಶಾಲೆಗೆ ಸೇರಿಸಲು ಆದ್ಯತೆ ನೀಡುತ್ತಾರೆ. ಇನ್ನೂ ಪ್ರತಿ ವರ್ಷದಂತೆ ಜ್ಞಾನಜ್ಯೋತಿ ಶಾಲೆಯಲ್ಲಿ 50 ಅಧಿಕ ಪ್ರವೇಶಾತಿಗಳು ಬಂದಿವೆ ಅಂತಾ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಸಂತೋಷ್ ಹೇಳಿದ್ದಾರೆ.‌

ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಕಲಬುರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ಇದೀಗ ಶೈಕ್ಷಣಿಕ ಚಟುವಟಿಕೆಗಳು ಪುನಾರಂಭಗೊಂಡಿದೆ. ಶಿಕ್ಷಣ ಇಲಾಖೆ ಕೂಡ ತರಗತಿಗಳು ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಪಾಲಕರು ಮತ್ತು ಮಕ್ಕಳಿಗೆ ಸಂತಸ ತಂದಿದೆ. ‌

Exit mobile version