Site icon PowerTV

ರಾತ್ರಿ ಮಹಿಳಾ & ಮಕ್ಕಳ ಆಸ್ಪತ್ರೆ ಶಿಫ್ಟ್

ಗದಗ : ನಗರದ ದಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಹೈಡ್ರಾಮಾವೇ ನಡೆಯಿತು. ಈ ಭಾಗದ ಬಡ ಜನ್ರಿರಿಗೆ ವರದಾನವಾಗಿದ್ದ ಆಸ್ಪತ್ರೆಯನ್ನ ಏಕಾಏಕಿ ನಗರದಿಂದ ಆರೇಳು ಕೀ.ಮೀ‌ ದೂರದ ಜಿಮ್ಸ್​​​ಗೆ ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಪವರ್ ಟಿವಿ ಕೂಡ ವರದಿ ಮಾಡಿತ್ತು. ಆದರೆ ಹಠ ಬಿಡದ ಆಡಳಿತ ಮಂಡಳಿ ಕೊನೆಗೂ ಇಲ್ಲಿನ ಹೆರಿಗೆ ವಿಭಾಗವನ್ನ ಜಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದೆ.

ಆಸ್ಪತ್ರೆ ಸ್ಥಳಾಂತರ ವಿರೋಧಿಸಿ ಜಯಕರ್ನಾಟಕ‌ ಸಂಘಟನೆ, ಕ್ರಾಂತಿ ಸೇನೆ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಸ್ಪತ್ರೆ ಎದುರಿನ ಕೆ.ಸಿ.ರಾಣಿ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದ್ರು ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡೋ ಉದ್ದೇಶದಿಂದ ಶಿಫ್ಟ್ ಮಾಡಿದ್ದಾರೆ ಅಂತ ಆರೋಪಿಸಿದ್ರು ಹಿಂದಿನ ಕಟ್ಟಡದಲ್ಲಿ ಆಸ್ಪತ್ರೆ ಮುಂದುವರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಮ್ಸ್ ವೈದ್ಯಕೀಯ ಅಧಿಕ್ಷಕ ರಾಜಶೇಖರ ಮ್ಯಾಗೇರಿ, ಪ್ರತಿಭಟನಾಕಾರರ ಮನವೊಲಿಸಿದರು. ಇಂಡಿಯನ್ ಮೆಡಿಕಲ್ ಕೌನ್ಸಿಲ್ ತಂಡ ಇದೇ ತಿಂಗಳಲ್ಲಿ ಪರಿಶೀಲನೆಗೆಂದು ಆಗಮಿಸಲಿದೆ. ಎರಡ್ಮೂರು ವರ್ಷಗಳಿಮದ ಜಿಮ್ಸ್​ನಲ್ಲಿ ಹೆರಿಗೆ ವಿಭಾಗವೇ ಇಲ್ಲ. ನಮ್ಮಲ್ಲಿರುವ ಸ್ನಾತಕೋತ್ತರ ವಿಭಾಗ ರದ್ದಾಗಿ ಹೋಗುತ್ತದೆ. ಹೆರಿಗೆಯ 19 ವಿಭಾಗಗಳು ಒಂದೇ ಕಡೆ ಇರಬೇಕು ಅನ್ನೋ ನಿಯಮವಿರೋದ್ರಿಂದ ಇಲ್ಲಿಂದ ಸ್ಥಳಾಂತರದ ಅನಿವಾರ್ಯತೆ ಇದೆ ಎಂದರು.

ನಗರದ‌ ಮಧ್ಯ ಭಾಗದಲ್ಲಿನ ಹೆರಿಗೆ ಆಸ್ಪತ್ರೆಯನ್ನಂತೂ ತಾಂತ್ರಿಕ ಕಾರಣದ ನೆಪವೊಡ್ಡಿ ಸ್ಥಳಾಂತರಿಸಿದ್ದಾರೆ. ಸದ್ಯ ನಗರದಲ್ಲಿರೋ ಹೆರಿಗೆ ಆಸ್ಪತ್ರೆಯಲ್ಲಿ ಓಪಿಡಿ ಸೇವೆ ಸೇರಿದಂತೆ ಗರ್ಭಿಣಿಯರಿಗೆ ಸಮರ್ಪಕ ಚಿಕಿತ್ಸೆ ಸಿಗಬೇಕಿದೆ. ಅಧಿಕಾರಿಗಳು ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಸದ್ಯಕ್ಕೆ ತಮ್ಮ ಪ್ರತಿಭಟನೆ ಕೈ ಬಿಟ್ಟಿದ್ದಾರೆ.

Exit mobile version