Site icon PowerTV

ದಾವಣಗೆರೆಯಲ್ಲಿ ಜಲ ದಿಗ್ಬಂಧನ..!

ದಾವಣಿಗೆರೆ : ಬೆಣ್ಣೆನಗರಿಗೆ ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯನ ಆರ್ಭಟ ಜೋರಾಗಿದ್ದು, ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.

ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ದಾವಣಗೆರೆ ನಗರ ನೀರಿನಿಂದ ಆವೃತವಾಗಿದೆ. ಮಿಟ್ಲಕಟ್ಟೆ, ಮುದಹದಡಿ, ಲೋಕಿಕೆರೆ ಗ್ರಾಮಗಳಲ್ಲಿ‌ ಕೊಯ್ಲಿಗೆ ಬಂದಿದ್ದ ಭತ್ತ ಕಟಾವಿಗೆ ತೊಂದರೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಹಲವೆಡೆ ಮನೆ ಕುಸಿತವಾಗಿದ್ದು,ದೊಡ್ಡಗಟ್ಟ, ಕೃಷ್ಣ ನಗರದಲ್ಲಿ ಮನೆ ಒಳಗೆ ನುಗ್ಗುತ್ತಿರುವ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಮಳೆಯಿಂದ ರಸ್ತೆಗಳು ಕರೆಯಂತಾಗಿದ್ದು,ರಸ್ತೆ ದಾಟಲಾಗದೇ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Exit mobile version