Site icon PowerTV

ಗುಜರಾತ್‌ ಸಾಲ್ಟ್‌ ಮಿಲ್‌ನಲ್ಲಿ ಗೋಡೆ ಕುಸಿತ : 12 ಮಂದಿ ಸಾವು

ಗುಜರಾತ್‌ : ಉಪ್ಪು ಪ್ಯಾಕೇಜಿಂಗ್​ ಕಾರ್ಖಾನೆಯೊಂದರ ಗೋಡೆ ಕುಸಿದ ಪರಿಣಾಮವಾಗಿ 12 ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್​ನ ಮೊರ್​ಬಿ ಜಿಲ್ಲೆಯಲ್ಲಿ ನಡೆದಿದೆ.

ಮೊರ್​ಬಿ ಜಿಲ್ಲೆಯ ಹಲ್​ವಾಡ್​ ಕೈಗಾರಿಕಾ ಪ್ರದೇಶದ ಸಾಗರ್​ ಸಾಲ್ಟ್​ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ. ಇನ್ನಪ್ಟು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಜೊತೆಗೆ ಮೋರ್ಬಿಯಲ್ಲಿ ಗೋಡೆ ಕುಸಿದು ಸಂಭವಿಸಿದ ದುರಂತ ಹೃದಯ ವಿದ್ರಾವಕವಾಗಿದೆ. ಮೃತ ಕುಟುಂಬಕ್ಕೆ ಬೆಂಬಲವಾಗಿ
ಮೃತ ಕುಟುಂಬಕ್ಕೆ ಬೆಂಬಲವಾಗಿ ಇರುತ್ತೇವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಸ್ಥಳೀಯ ಅಧಿಕಾರಿಗಳು ಎಲ್ಲ ರೀತಿಯ ನೆರವು ನೀಡಲಿದ್ದಾರೆ” ಎಂದು ಭರವಸೆ ನೀಡಿದ್ದಾರೆ. ಇನ್ನು ಪಿಎಂಎನ್‌ಆರ್‌ಫ್‌ ನಿಂದ ಮೃತ ಕುಟುಂಬಕ್ಕೆ ತಲಾ 2 ಲಕ್ಷ ರೂ ಮತ್ತು ಗಾಯಾಳು ಕುಟುಂಬಕ್ಕೆ 50 ಸಾವಿರ ರೂ. ಧನ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ.

Exit mobile version