Site icon PowerTV

ಶಾಲೆಯ ಗೋಡೆ ಕುಸಿದು : ಸ್ಥಳದಲ್ಲೇ ಓರ್ವ ಮೃತ

ಹಾಸನ : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಶಾಲೆಯ ಗೋಡೆ ಕುಸಿದು ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನಪ್ಪಿರುವ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಶಿವಕುಮಾರ್ (28) ಮೃತ ದುರ್ದೈವಿ. ಈತ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ.ಹೊಸೂರು ಗ್ರಾಮದವರಾಗಿದ್ದಾರೆ.

ಸರ್ಕಾರಿ ಶಾಲಾ ಕಟ್ಟಡ ಹಳೆಯದಾಗಿದ್ದರಿಂದ, ಹೊಸ ಕಟ್ಟಡ ನಿರ್ಮಿಸಿ ಶಾಲೆಯನ್ನು ಸ್ಥಳಾಂತರಿಸಲಾಗಿತ್ತು. ಆದರೆ, ನಿನ್ನೆ ರಾತ್ರಿಯಿಂದ ಸುರಿದ ಮಳೆಯಿಂದ ಹಳೆ ಶಾಲಾ ಕಟ್ಟಡ ಇಂದು ಬೆಳಿಗ್ಗೆ ವ್ಯಕ್ತಿಯ ಮೇಲೆ ಕುಸಿದು ಮೃತ ಪಟ್ಟಿದ್ದಾರೆ.

ಸದ್ಯ ಸ್ಥಳಕ್ಕೆ ತಹಸೀಲ್ದಾರ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಪ್ರಕರಣವು ಹಳೇ ಮೈಸೂರು ಪೊಲೀಸ್ ರಾಣೆ ವ್ಯಾಪ್ತಿಯಲ್ಲಿ  ನಡೆದಿದೆ.

Exit mobile version