Site icon PowerTV

ಗದಗ-ಬೆಟಗೇರಿ ರೈಲ್ವೇ ಸ್ಟೇಷನ್‌ಗೆ ಹೊಸ ಟಚ್​

ಗದಗ : ನೈಋತ್ಯ ರೈಲ್ವೆ ವಿಭಾಗದ ಗದಗ ಜಂಕ್ಷನ್ ರೈಲ್ವೆ ನಿಲ್ದಾಣ ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ಮೊದ್ಲು ಮೂಲಭೂತ ಸೌಕರ್ಯಗಳ ಇಲ್ಲದಿದ್ದಕ್ಕೆ, ಇಲ್ಲಿಂದ ಪ್ರಯಾಣಿಸಲು ಜನ ಹಿಂದೇಟು ಹಾಕ್ತಿದ್ದರು. ಕುಡಿಯುವ ನೀರು, ಶೌಚಾಲಯ, ಸಿಸಿ‌ ಕ್ಯಾಮೆರಾ, ಸ್ವಚ್ಛತೆ, ಫ್ಲೈ ಓವರ್ ಇದ್ಯಾವುದು ಇಲ್ಲಿರಲಿಲ್ಲ. ಗದಗ-ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಸಾಕಷ್ಟು ಹೋರಾಟ ಮಾಡಲಾಗಿತ್ತು. ಇದೀಗ ಈ ನಿಲ್ದಾಣ ಹೊಸ ಟಚ್ ಪಡೆದುಕೊಂಡಿದೆ.ಶೀಘ್ರವೇ ಎಸ್ಕಲೇಟರ್‌ ಕೂಡ ಬರಲಿದೆ.

ನಿಲ್ದಾಣದಲ್ಲಿ 2 ಎಸ್ಕಲೇಟರ್, 2 ಲಿಫ್ಟ್, 3ಕಡೆ ಫುಟ್ ಓವರ್ ಬ್ರಿಡ್ಜ್, ಹೊಸ ಸ್ಟೀಲ್ ಬೆಂಚ್, 27 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶೀಘ್ರದಲ್ಲೆ ಲಿಫ್ಟ್, ಎಸ್ಕಲೇಟರ್ ಆರಂಭವಾಗಲಿದೆ.ಜೊತೆಗೆ ಸುಂದರವಾದ ಉದ್ಯಾನವನ, ಕಾಂಪೌಂಡ್‌ಗೆ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳು, ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು, ಪಂಡಿತ ಭೀಮಸೇನ್ ಜೋಷಿ ಪುತ್ಥಳಿ ಮಾಡಲಾಗಿದ್ದು, ಪ್ರಯಾಣಿಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

Exit mobile version