Site icon PowerTV

ನಟಿ ಚೇತನಾ ರಾಜ್​​ ಸಾವಿಗೆ ಮನನೊಂದು ಮೋಹಕ ತಾರೆ ರಮ್ಯಾ ಟ್ವಿಟ್​​

ಬೆಂಗಳೂರು: ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ 22ರ ಪ್ರಾಯದ ನಟಿ ಚೇತನಾ ರಾಜ್ ಅವರು ನಿಧನರಾಗಿದ್ದು ನೋವಿನ ಸಂಗತಿ..ನಿನ್ನೆ ಫ್ಯಾಟ್ ಸರ್ಜರಿ ವೈಫಲ್ಯದಿಂದ ಕೊನೆಯುಸಿರೆಳೆದರು. ಈ ಘಟನೆ ಕುರಿತು ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಇಂಡಸ್ಟ್ರಿ ನಿಜವಾದ ಬ್ಯೂಟಿ ಒಪ್ಪಿಕೊಳ್ಳುವುದಿಲ್ಲ, ಸದಾ ಮೇಕಪ್​​ ಕಾಸ್ಮೆಟಿಕ್ಸ್ ಬ್ಯೂಟಿಯನ್ನು ಒಪ್ಪಿಕೊಳ್ಳುತ್ತಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಬ್ಯೂಟಿ ಪ್ರೆಜರ್ ಇರೋದು ನಿಜ
ಸ್ವತಃ ನಾನೇ ಅನುಭವಿಸಿದ್ದೀನಿ ಮುಖದಿಂದ ಹಿಡಿದು ಕಾಲಿನವರೆಗೂ ಎಷ್ಟು ಕೇರ್ ಮಾಡಬೇಕು. ಚಿತ್ರರಂಗದಲ್ಲಿ ಸೌಂದರ್ಯದ ಕುರಿತಂತೆ ನಟಿಯರ ಮೇಲೆ ಯಾವ ರೀತಿ ಒತ್ತಡ ಹೇರಲಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೇ, ಈ ರೀತಿಯ ಒತ್ತಡಗಳನ್ನುತೆಗೆದುಹಾಕಬೇಕು ಎಂದು ಹೇಳಿದ್ದಾರೆ.

ಇನ್ನು, 2018ರಲ್ಲಿ ನನ್ನ ದೇಹದ ತೂಕ ಇಳಿಸಲು ನಾನು ಕೂಡ ಪ್ರಯತ್ನ ಮಾಡಿದ್ದೀನಿ. ಆದರೆ, ಅದು ಅಷ್ಟು ಬೇಗ ಆಗುವ ಕೆಲಸ ಅಲ್ಲ, ತಾಳ್ಮೆ ಇರಬೇಕು. ಪುರುಷರು 65 ವರ್ಷವಾಗಿ ತಲೆ ಮೇಲೆ ಕೂದಲು ಹೋದರು ಸಹ ಅವರನ್ನ ಹೀರೋ ಅಂತಾನೆ ಕರೀತಾರೆ. ಆದರೆ, ನಟಿಯರಿಗೆ ಹಾಗಲ್ಲ ಸ್ವಲ್ಪ ದಪ್ಪ ಆದ್ರೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡ್ತಾರೆ.

ಒಟ್ಟಾರೆ ಪ್ರಸ್ತುತ ಘಟನೆಯ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಚೇತನಾ ಸಾವಿಗೆ ಬೇಸರ ವ್ಯಕ್ತಪಡಿಸುವುದರ ಜೊತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Exit mobile version