Site icon PowerTV

ಮುತಾಲಿಕ್​​​ನನ್ನು ಗಡಿಪಾರು ಮಾಡುವಂತೆ ದಲಿತ ಸಂಘಟನೆ ಆಗ್ರಹ

ಹುಬ್ಬಳ್ಳಿ : ಸಂವಿಧಾನ ರಕ್ಷಣೆಗಾಗಿ ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಬಂಧಿಸುವಂತೆ ದಲಿತ ಸಂಘಟನೆಯಿಂದ ತಹಶೀಲ್ದಾರ್ ಕಚೇರಿ ಮುಂಭಾಗ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಜೈ ಭೀಮ್ ಸಂಘಟನೆಯಿಂದ ಪ್ರತಿಭಟನೆಯಿಂದ ನಡೆಸುತ್ತಿದ್ದು, ಮುತಾಲಿಕ್​​ ಅವರು, ಎಲ್ಲಾ ವಿಷಯದಲ್ಲಿ ಧರ್ಮ ಎಳೆದು ತರುವುದು ಸರಿಯಲ್ಲ ಹಾಗೂ ದೇಶದ್ರೋಹ ಕಾನೂನು ಅಡಿಯಲ್ಲಿ ಬಂಧಿಸುವಂತೆ ರ್ಯಾಲಿ ನಡೆಸಿ ತಹಶೀಲ್ದಾರ್​​ ಹತ್ತಿರ ಮನವಿ ಮಾಡಿದ್ದಾರೆ.

ಅಲ್ಲದೇ ಸಂವಿಧಾನ ವಿರೋಧಿ ಕಾರ್ಯಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಮುತಾಲಿಕ್ ಅವರು ಯಾವಗಲೂ ಒಂದೇ ಸಮುದಾಯವನ್ನು ಗುರಿ ಇಟ್ಟುಕೊಂಡು ಮಾತನಾಡುತ್ತಿರುತ್ತಾರೆ. ಮುಸ್ಲಿಂ ಸಮಾಜದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮಸೀದಿಗೆ ಮುತ್ತಿಗೆ ಹಾಕುತ್ತೇನೆ ಎನ್ನಲು ಈತ ಯಾರು ? ಧರ್ಮ ಧರ್ಮದ ವಿರುದ್ಧ ಜಗಳದ ಕಿಡಿ ಹಚ್ಚುಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ರಾಮರಾಜ್ಯ ಅಂದರೆ ಇದೇನಾ..? ಬಡವರ  ಮೇಲೆ ಗಲಾಟೆ ಮಾಡುವುದು ರಾಮನ ಸೈನ್ಯ ಕೆಲಸವ ? ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದಾರೆ? ಹೀಗಾಗಿ ಕೂಡಲೇ ಅವರನ್ನು ಬಂಧಿಸಿ ,ಗಡಿಪಾರು ಮಾಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡುತ್ತೇವೆ. ಹಾಗು ಸರ್ಕಾರ ಎಚ್ಛೆತ್ತುಕೊಳ್ಳಬೇಕು ಎಂದು ದಲಿತ ಮುಖಂಡ ಶಂಕರ್ ಅಜಮನಿ ಗುಡುಗಿದರು.

Exit mobile version