Site icon PowerTV

ಪ್ರೀತಿ ಪ್ರೇಮದ ಹೆಸರಲ್ಲಿ ಯುವತಿಯರಿಗೆ ಮೋಸ : ಆರೋಪಿ ಅಂದರ್​​

ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರಿಗೆ ಬೆತ್ತಲೆ ಪೋಟೋ ಕಳುಹಿಸುತ್ತಿದ್ದ ಕಾಮುಕನನ್ನು ಸ್ಥಳೀಯ ಮಹಿಳಾ ಠಾಣೆಯವರು ಬಂಧಿಸಿದ್ದಾರೆ.

ಶಿವಪ್ರಕಾಶ್ B G ಬಂಧಿತ ಆರೋಪಿ. ಈತ ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಗುರುಸಿದ್ದಪ್ಪ ಪುತ್ರ.

ಸಾಮಾಜಿಕ ಜಾಲತಾಣದಲ್ಲಿ ಯುವತಿಯರನ್ನ ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದ. ಅಲ್ಲದೇ ಬಲೆಗೆ ಬೀಳೋ ಯುವತಿರನ್ನ ಲೈಂಗಿಕವಾಗಿ ಬಳಸಿಕೊಂಡು, ವಿಡಿಯೋ ಮಾಡಿಟ್ಟುಕೊಂಡು ಹಣ ಅವರಿಗೆ ಬ್ಲಾಕ್​​ಮೇಲ್​​  ಮಾಡಿ ದುಡ್ಡು ಪಡೆಯುತ್ತಿದ್ದ.

ಮೈಸೂರು ಮೂಲದ ಯುವತಿ ಜೊತೆ ಪ್ರೀತಿ ಹೆಸರು ಹೇಳಿ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷದವರೆಗೆ ಹಣ ಪಡೆದಿದ್ದ. ಇದರಿಂದ ನೊಂದ ಯುವತಿ ಮಹಿಳೆಗೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಯಪ್ರೌವೃತ್ತರಾದ ಜಿಲ್ಲಾ ಪೊಲೀಸರಿಂದ ಆರೋಪಿ ಶಿವಪ್ರಕಾಶ್ ಬಂಧಿಸಿ, ತನಿಖೆ ನಡೆಸಲಾಗುತ್ತಿದೆ. ಅಷ್ಟೆ ಅಲ್ಲದೇ  ಹಲವು ಯುವತಿಯರ ಜೊತೆ ಪ್ರೀತಿ ನಾಟಕವಾಡಿ ಏಕಾಂತದಲ್ಲಿರೋ ವಿಡಿಯೋವನ್ನು ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾನೆ.

Exit mobile version