Site icon PowerTV

ನಾವು ವಿಜಯಪುರ- ಬಾಗಲಕೋಟೆ ಮಂದಿ ಖಡಾಮುಡಿ ಇತಿ೯ವಿ : ಯತ್ನಾಳ್​

ಬಾಗಲಕೋಟೆ : ನಾವು ಡೈರೆಕ್ಟ್ ಮಾತನಾಡ್ತೀವಿ ಅಂತ ಹೇಳಿಯೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ ಇಲ್ಲವಾದ್ರೆ ಕನಾ೯ಟಕ ಕಳ್ಳಕಾರ, ದರೋಡೆಕೋರರ ಕೈಯಲ್ಲಿ ಸಿಕ್ಕು ಸತ್ಯಾನಾಶವಾಗುತ್ತಿತ್ತು ಎಂದು ಬೇವೂರ ಗ್ರಾಮದಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ದುಗಾ೯ದೇವಿ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಅವರು, ನಾವು ವಿಜಯಪುರ- ಬಾಗಲಕೋಟೆ ಮಂದಿ ಖಡಾಮುಡಿ ಇತಿ೯ವಿ. ನಾನು ವಿಜಯಪುರದೊಳಗೆ, ಶಾಸಕ ಚರಂತಿಮಠ ಬಾಗಲಕೋಟೆಯೊಳಗೆ ನಾವಿಬ್ಬರು ಖಡಾಮುಡಿ ಮಾತನಾಡ್ತೀವಿ, ಬಾಕಿ ಗೀಕಿ ಇ್ಟಟ್ಟು ಮಾತನಾಡೋ ಸ್ವಭಾವ ನಮ್ಮದಲ್ಲ ಎಂದರು.

ಅದುವಲ್ಲದೇ, ಇಂದಿನ ರಾಜಕೀಯದಲ್ಲಿ ನೇರವಾಗಿ ಮಾತನಾಡೋ ಸ್ಥಿತಿ ಇಲ್ಲ. ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡಿದ್ರೆ ಸಾಕು, ಏನ್ರಿ ಅವಾ ಬಹಳ ಡೈರೆಕ್ಟ್ ಮಾತನಾಡ್ತಾನ ಅಂತಾರಾ.ನಾವು ಡೈರೆಕ್ಟ್ ಮಾತನಾಡ್ತೀವಿ ಅಂತ ಹೇಳಿಯೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ. ಕಳ್ಳರು ಕಾಕರು, ದರೋಡೆಕೋರರು ಕೂಡಿ ಬಿಟ್ಟರೆ ಸಾಕು ಇಡೀ ಕನಾ೯ಟಕವನ್ನೇ ಸತ್ಯಾನಾಶ ಮಾಡಿ ಬಿಡ್ತಾರೆ. ಬಾಗಲಕೋಟೆ ಜಿಲ್ಲೆಯ ಬೇವೂರ ಗ್ರಾಮದಲ್ಲಿ ಯತ್ನಾಳ ಹೇಳಿದರು.

Exit mobile version