Site icon PowerTV

ರಥೋತ್ಸವ ವೇಳೆ ಪುನೀತ್ ರಾಜ್ ಕುಮಾರ್ ಭಾವಚಿತ್ರ ಪ್ರದರ್ಶನ

ಚಿಕ್ಕೋಡಿ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ 7 ತಿಂಗಳುಗಳೇ ಕಳೆದರೂ ಅವರ ಅಭಿಮಾನ ದಿನಕಳೆದಂತೆ ಹಿರಿಯರಿಂದಾದಿಯಾಗಿ ಯುವಜನತೆಯಲ್ಲಿಯೂ ಜಾಸ್ತಿಯಾಗುತ್ತಿದೆ. ಝುಂಜರವಾಡ ಗ್ರಾಮದಲ್ಲಿ ಶ್ರೀ ಅಪ್ಪಯ್ಯ ಸ್ವಾಮೀಜಿ ಹಾಗೂ ಚಂದ್ರಯ್ಯ ಸ್ವಾಮಿಗಳ ರಥೋತ್ಸವದಲ್ಲಿ ಅಭಿಮಾನಿಯೋರ್ವರು ಡಾಕ್ಟರ್ ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶಿಸಿ ವಿಶೇಷ ಅಭಿಮಾನ ಮೆರೆದರು.

ಮನುಕುಲದ ಒಳಿತಿಗಾಗಿ ಸಮಾಜದ ಏಳ್ಗೆಗಾಗಿ ಸದ್ದಿಲ್ಲದೆ ಸುದ್ದಿಯಾಗದೆ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಸಮಾಜ ಸೇವೆ ಸಲ್ಲಿಸಿ ಕೋಟ್ಯಂತರ ಅಭಿಮಾನಿ ಹೃದಯಗಳನ್ನು ಅಗಲಿ ಹೋಗಿರುವ ರಾಜಕುಮಾರನ ನೆನಪು ಮಾತ್ರ ಸೂರ್ಯ ಚಂದ್ರ ಇರುವವರೆಗೆ ಚಿರಕಾಲ ಇರುತ್ತದೆ ಎಂಬುದು ಅಭಿಮಾನಿ ದೇವರುಗಳ ಆಶಯವಾಗಿದೆ ಎಂಬುದಕ್ಕೆ ಜಾತ್ರೆ ಉತ್ಸವ ಸಭೆ ಸಮಾರಂಭಗಳಲ್ಲಿ ಎಲ್ಲೆಡೆಯೂ ಪುನೀತ್ ರಾಜ್ ಕುಮಾರ್ ಭಾವಚಿತ್ರ ಮುನ್ನೆಲೆಗೆ ಬರುತ್ತಿರುವುದು ಪುನೀತ್ ರಾಜಕುಮಾರ್ ಅವರ ಮಾನವೀಯ ಮೌಲ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

Exit mobile version