Site icon PowerTV

ಬಾಗಲಕೋಟೆ ವಕೀಲೆ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್

ಬಾಗಲಕೋಟೆ : ಎರಡು ದಿನಗಳ ಹಿಂದೆ ವಕೀಲೆ ಸಂಗೀತಾ ಶಿಕ್ಕೇರಿ‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ವಿಡಿಯೋ ಬಹಳಷ್ಟು ಸುದ್ದಿಯಾಗಿತ್ತು ಇದೀಗ ಆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಪೊಲೀಸರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಕೀಲೆ ಸಂಗೀತಾ ಸಿಕ್ಕೇರಿ ಹಾಗೂ ಪತಿಯಿಂದ ಮಾಹಿತಿ ಪಡೆದಿದ್ದರು, ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಮಾತ್ರ ನಾನು ಮೊದಲು ಹಲ್ಲೆ ಮಾಡಿಲ್ಲ. ಪೊಲೀಸರು ಸಂಗೀತಾ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನ್ನನ್ನು ಚಪ್ಪಲಿಯಿಂದ‌ ಹೊಡೆದು ,ಅವಾಚ್ಯ ಶಬ್ದಗಳಿಂದ ಬೈದಿದ್ದರು. ಆದ್ದರಿಂದ ಕೋಪಗೊಂಡು ಕೈ ಮಾಡಿದ್ದೆ ಎಂದು ಹೇಳಿದ್ದರು.

ಇದೀಗ ಈ ಘಟನೆ ಸಂಬಂಧಿತ ಮತ್ತೊಂದು ಭಾಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ಮಹಾಂತೇಶ ಚೋಳಚಗುಡ್ಡ ಮೇಲೆ ಮಹಿಳೆಯು ಚಪ್ಪಲಿಯಿಂದ ಹೊಡೆದಿದ್ದಾರೆ. ನಂತರ ಅಲ್ಲಿಂದಲೇ ಶುರುವಾಗಿದೆ. ನಂತರ ಮಹಿಳೆಯ ಮೇಲೆ ಹಲ್ಲೆಯಾಗಿರುವ ದೃಶ್ಯ ಸೆರೆಯಾಗಿದೆ.

ಇನ್ನು ನಿನ್ನೆ ಬಾಗಲಕೋಟೆ ನಗರದಲ್ಲಿ ಇಬ್ಬರ ಪರ ಮತ್ತು ವಿರೋಧವಾಗಿ ನಡೆದಿದ್ದ ಪ್ರತಿಭಟನೆಗಳಾಗಿವೆ.
ಬಾಗಲಕೋಟೆ ನಗರದಲ್ಲಿ ವಕೀಲೆ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ.

Exit mobile version