Site icon PowerTV

ನಿರಂತರ ಮಳೆಯಿಂದ 12 ಗ್ರಾಮಗಳಲ್ಲಿ ಭೂಕುಸಿತ

ಅಸ್ಸಾಂ :  ಸಿಲಿಕಾನ್​ ಸಿಟಿ ಸೇರಿ ರಾಜ್ಯದ ವಿವಿಧೆಡೆ ಈಗಾಗಲೇ ಮಳೆ ಆರಂಭವಾಗಿದೆ. ಅತ್ತ, ಅಸ್ಸಾಂ ಮಾತ್ರ ಹೆಚ್ಚಿನ ಮಳೆಯಿಂದ ತತ್ತರಿಸುತ್ತಿದೆ. ಅಸ್ಸಾಂನಲ್ಲಿ ಸಾವಿರಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದು, ಈಗಾಗಲೇ ಏರ್​ಫೋರ್ಸ್​ನ ಚಾಪರ್​ಗಳು ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿವೆ.

ಇನ್ನು, ಕಳೆದ ಕೆಲವು ದಿನಗಳಿಂದ ಈಶಾನ್ಯ ರಾಜ್ಯದಲ್ಲಿ ಸಾವಿರಾರು ಜನರು ಬಾಧಿತರಾಗಿರುವುದರಿಂದ ಅಸ್ಸಾಂ ಭಾರೀ ಮಳೆ ಮತ್ತು ಕೆಲವು ಭಾಗಗಳಲ್ಲಿ ಭೂಕುಸಿತದಿಂದ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ನಿರಂತರ ಮಳೆಯಿಂದಾಗಿ ಅಸ್ಸಾಂನ 12 ಗ್ರಾಮಗಳಲ್ಲಿ ಭೂಕುಸಿತವಾಗಿದೆ. ಇನ್ನು, ಗುವಾಹಟಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್‌ನಲ್ಲಿ ರೈಲ್ವೆ ಹಳಿ, ಸೇತುವೆಗಳು ಮತ್ತು ರಸ್ತೆಗಳು ಹಾನಿಯಾಗಿವೆ.

Exit mobile version