Site icon PowerTV

ಅಕ್ರಮವಾಗಿ ಜಿಂಕೆ ಕೊಂಬು ಸಾಗಾಟ: ಇಬ್ಬರು ಆರೋಪಿಗಳ ಬಂಧನ

ರಾಮನಗರ : ಜಿಂಕೆಯ ಕೊಂಬುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಬಂಧಿಸಲಾಗಿದೆ.

ಮರಳವಾಡಿ ಹೋಬಳಿ ಯಲಚವಾಡಿ ಗ್ರಾಮದ ದಿನೇಶ್ (19), ಗಣೇಶ್ (21) ಜಿಂಕೆಯ ಕೊಂಬುಗಳನ್ನು ಸಾಗಿಸುತ್ತಿದ್ದ ಆರೋಪಿಗಳು. ಬ್ಯಾಗಿನಲ್ಲಿ ಜಿಂಕೆಯ ಕೊಂಬುಗಳನ್ನು ಇಟ್ಟುಕೊಂಡು ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದಾರೆ. ಡಿಪೋ ಮ್ಯಾನೇಜರ್ ಬ್ಯಾಗ್​​ ಯಾರದು ಎಂದು ಹುಡುಕಿ ಅವರಿಗೆ ಹಿಂದಿರುಗಿಸುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಬಳಿಕ ಹಾರೋಹಳ್ಳಿ ಉಪವಲಯ ಅರಣ್ಯಾಧಿಕಾರಿ ರಮೇಶ್ ಯಂಕಂಚಿಗೆ ಬಸ್​​ ಡಿಪೋ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ತಕ್ಷಣವೇ  ಅರಣ್ಯಾಧಿಕಾರಿಗಳು ಇಬ್ಬರು ಹುಡುಗರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ವಲಯ ಅರಣ್ಯಾಧಿಕಾರಿ ದಾಳೇಶ್.ಎ.ಎಸ್‌. ಮಾಹಿತಿ ತಿಳಿಸಿದ್ದಾರೆ.

Exit mobile version