Monday, August 25, 2025
Google search engine
HomeUncategorizedಬಾಲ್ಯ ಮೆಲುಕು ಹಾಕಿದ ಹೆಚ್​ಡಿಕೆ

ಬಾಲ್ಯ ಮೆಲುಕು ಹಾಕಿದ ಹೆಚ್​ಡಿಕೆ

ಬೆಂಗಳೂರು: ಮಕ್ಕಳು ನಲಿಯುತ್ತಾ ಶಾಲೆಗೆ ಬಂದ ದೃಶ್ಯಗಳನ್ನು ಕಂಡು ನನ್ನ ಮನಸ್ಸು ಪುಳಕಿತವಾಗಿದೆ. ನನ್ನ ಬಾಲ್ಯದ ದಿನಗಳು ನೆನಪಾದವು. ಅಪ್ಪ-ಅಮ್ಮನ ಬೆರಳಿಡಿದು ತರಗತಿಗಳತ್ತ ಬಂದ ಚಿಣ್ಣರ ಸಂಭ್ರಮ ಇಡೀ ನಾಡಿಗೆ ಹೊಸಕಳೆ ತಂದಿದೆ ಎಂದು ತಮ್ಮ ಬಾಲ್ಯದ ಶಾಲಾ ದಿನಗಳನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವಂತ ಅವರು, ಶಾಲೆಗೆ ಬಂದ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸಿದ ಸಮಸ್ತ ಶಿಕ್ಷಕ ಬಂಧುಗಳಿಗೆ ಅಭಿನಂದನೆಗಳು. ಮಕ್ಕಳ ಜತೆ ಮಕ್ಕಳಾಗಿ ಶಿಕ್ಷಕರು ವಹಿಸುವ ಜವಾವ್ದಾರಿ ಮಹತ್ವದ್ದು. ಕೋವಿಡ್‌ʼನಿಂದ ಬಳಲಿದ ಕಲಿಕಾ ವ್ಯವಸ್ಥೆಗೆ ನವಚೈತನ್ಯ ತುಂಬಿದವರೂ ಇವರೇ ಅವರ ಸಮಸ್ಯೆ-ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರ ಉದಾಸೀನ ಮಾಡಬಾರದು ಎಂದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments