Site icon PowerTV

ಕೊಲೆ ಪ್ರಕರಣ: ಪೊಲೀಸರ ಸುಪರ್ದಿಯಿಂದ ತಪ್ಪಿಸಿಕೊಳ್ಳಲು ಆರೋಪಿ ಯತ್ನ

ಶಿವಮೊಗ್ಗ :ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಬೈಕ್ ನಲ್ಲಿ ಠಾಣೆಗೆ ಕರೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ, ಮಾ. 20 ರಂದು ಜಿಕ್ರು ಎಂಬಾತನ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣದಲ್ಲಿ ರೂಮನ್ ಎಂಬಾತನನ್ನು ಎ4 ಆರೋಪಿಯಾಗಿದ್ದ. ಮನೆಯಲ್ಲಿಯೇ ಇರುವ ಮಾಹಿತಿಯನ್ನು  ಖಚಿತ ಪಡಿಸಿಕೊಂಡು ದೊಡ್ಡಪೇಟೆ ಕಾನ್ಸ್‌ಟೇಬಲ್​​ಗಳಾದ ನಿತಿನ್ ಹಾಗು ರಮೇಶ್ ಎಂಬುವರು ಆತನ ಮನೆಗೆ ತೆರಳಿ ಬಂಧಿಸಿದ್ದಾರೆ.

ಮನೆಯಿಂದ ಬೈಕ್​​ನಲ್ಲಿ ಕೂರಿಸಿಕೊಂಡು ಠಾಣೆಗೆ ಬರುವ ವೇಳೆ ದಾರಿ ಮಧ್ಯೆದಲ್ಲಿ ಆರೋಪಿ ತಪ್ಪಿಸಿಕೊಳ್ಳುವ ಸಲುವಾಗಿ ಒದ್ದಾಡಿದ್ದಾನೆ. ಹೀಗಾಗಿ ಬೈಕ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆದರೆ, ಪೊಲೀಸರ ಕಾರ್ಯಕ್ಷಮತೆ ಹಾಗು ಆರೋಪಿಗೆ ಪ್ರತಿರೋಧ ಒಡ್ಡಿದ್ದರಿಂದ ಪೊಲೀಸರ ಕಪಿಮುಷ್ಠಿಯಿಂದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ನಂತರ 112 ವಾಹನ ಸ್ಥಳಕ್ಕೆ ಕರೆಯಿಸಿಕೊಂಡ ಪೊಲೀಸರು ಆ ವಾಹನದಲ್ಲಿ ಆರೋಪಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಎಲ್ಲಾ ದೃಶ್ಯವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹರಸಾಹಸದಿಂದ ಆರೋಪಿಯನ್ನು ಠಾಣೆಗೆ ಕರೆತಂದ ಪೊಲೀಸರು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Exit mobile version