Site icon PowerTV

ಶಾಲೆಗೆ ಸೇರಿಸಲು ಬಂದಿದ್ದ ಪೋಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಶಿವಮೊಗ್ಗ : ಶಾಲೆಗೆ ಮಗುವನ್ನು ಸೇರಿಸಲು ಬಂದಿದ್ದ ಪೋಷಕರಿಗೆ ಫಾದರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿರುವ ಘಟನೆ ಸಾಗರ ರಸ್ತೆಯ ಗಾಡಿಕೊಪ್ಪ ಬಡಾವಣೆಯಲ್ಲಿರುವ ಶಾಲೆಯಲ್ಲಿ ನಡೆದಿದೆ.

ನಗರದ ಸೈಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಮಗಳನ್ನು ಸೇರಿಸಲು ಬಂದಿದ್ದ ಪೋಷಕರಿಗೆ ಶುಲ್ಕ ಹೆಚ್ಚಿಗೆ ಕೇಳಿದ್ದಾರೆ. ಈ ವೇಳೆ ಪೋಷಕರು ಹೆಚ್ಚುವರಿ ಶುಲ್ಕ ಏಕೆ ಎಂದು ಪ್ರಶ್ನಿಸಿದ್ದಕ್ಕೆ ಅಡ್ಮಿಷನ್ ನಿರಾಕರಣೆ ಮಾಡಿದ್ದಾರೆ. ಹಾಗೂ ಶಾಲೆಯಲ್ಲಿ ತಮ್ಮ ಮಗುವಿಗೆ ಅಡ್ಮಿಷನ್ ಕೊಡುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿಯವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಗೇಟಿನೊಳಗೆ ಪೋಷಕರಿಗೆ ಎಂಟ್ರಿ ಕೊಡಬೇಡಿ ಎಂದು ಫಾದರ್ ಆವಾಜ್ ಹಾಕಿ ಏರುದನಿಯಲ್ಲಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ಪೋಷಕರನ್ನು ಫಾದರ್ ಹೀಯ್ಯಾಳಿಸಿದ್ದಾರೆ.

ಇನ್ನು ಈ ವಿಷಯವನ್ನು ತಿಳಿದು ಹಿಂದೂ ಸಂಘಟನೆ ಮುಖಂಡರು ಶಾಲೆಗೆ ತೆರಳಿ ಫಾದರ್​​ಗೆ ಮತ್ತು ಆಡಳಿತ ಮಂಡಳಿಯವರಿಗೆ ತರಾಟೆಗೆ ತೆಗೆದುಕೊಂಡು ಫಾದರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version