Site icon PowerTV

ಅಕ್ರಮ ಸಂಬಂದಕ್ಕೆ ಅಡ್ಡಿ ತಮ್ಮನ ಕಥೆ ಮುಗಿಸಿದ ಅಕ್ಕ

ಹೆಬ್ಬಾಳ :ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ನೂಲ್ವಿ ಹೊರವಲಯದಲ್ಲಿ ಅಮಾನುಷವಾಗಿ ಹತ್ಯೆಯಾಗಿದ್ದ ಶಂಭು ಕಮಡೊಳ್ಳಿ ಎಂಬಾತನ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೃತ ಶಂಭುವಿನ ಅಕ್ಕ ಹಾಗೂ ಆಕೆಯ ಪ್ರಿಯಕರ ಚೆನ್ನಪ್ಪನೇ ಶಂಭುವಿನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಶಂಭು ಹಾಗೂ ಚೆನ್ನಪ್ಪ ಸ್ನೇಹಿತರು. ಆಗಾಗ ಶಂಭುವಿನ ಮನೆಗೆ ಬರುತ್ತಿದ್ದ. ಚೆನ್ನಪ್ಪನಿಗೆ ಗಂಡ ಮೃತಪಟ್ಟು ತವರು ಸೇರಿದ್ದ ಶಂಭುವಿನ ಅಕ್ಕ ಬಸವ್ವಳ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು. ಶಂಭು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ. ಹಲವು ಬಾರಿ ಚೆನ್ನಪ್ಪನ ಜೊತೆ ಜಗಳ ಕೂಡಾ ಆಡಿದ್ದ. ಆದ್ರೆ,ಶುಕ್ರವಾರ ರಾತ್ರಿ ಈ ಜಗಳ ಅತಿರೇಕಕ್ಕೆ ಹೋದಾಗ ಕುಡಿದ ಮತ್ತಿನಲ್ಲಿದ್ದ ಶಂಭುವಿನ ತಲೆ ಮೇಲೆ ಚೆನ್ನಪ್ಪ ಕಲ್ಲಿನಿಂದ ಹೊಡೆದು, ಮರ್ಮಾಂಗಕ್ಕೆ ಒದ್ದು ಕೊಲೆಗೈದು ಅನುಮಾನ ಬಾರದಂತೆ ಕೆಲಸ ಮಾಡಿಕೊಂಡಿದ್ದ. ಶಂಭು ಅಕ್ಕ ಬಸವ್ವ ಕೂಡ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದಳು ಎನ್ನಲಾಗಿದೆ.

ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಕೇವಲ 24 ಗಂಟೆಯಲ್ಲಿ ಚೆನ್ನಪ್ಪನನ್ನು ಪೊಲೀಸ್ ಭಾಷೆಯಲ್ಲೇ ವಿಚಾರಣೆ ನಡೆಸಿದಾಗ ಎಲ್ಲ ಸತ್ಯ ಬಾಯಿಬಿಟ್ಟಿದ್ದಾನೆ.

ಒಟ್ಟಿನಲ್ಲಿ ತನ್ನ ಕಾಮದಾಟಕ್ಕೆ ಒಡ ಹುಟ್ಟಿದ ತಮ್ಮನನ್ನೇ ಕೊಲೆ ಮಾಡಲು ಸಂಚು ರೂಪಿಸಿದ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರನನ್ನು ಇದೀಗ ಪೊಲೀಸರು ಬಂಧಿಸಿ ಇದೀಗ ಜೈಲಿಗೆ ಅಟ್ಟಿದ್ದಾರೆ.

Exit mobile version