Site icon PowerTV

ಜೈಕಾರ ವಿಷಯಕ್ಕೆ ಶಿವಲಿಂಗೇಗೌಡ ಗರಂ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣಗೆ ಜೈಕಾರ ಹಾಕಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ತಿರುಪತಿಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನಗೆ ಜೈಕಾರ ಹಾಕದ ಯುವಕರಿಗೆ ಶಾಸಕ ಕುಟುಕಿದ್ದು, ಪ್ರಜ್ವಲ್‌ ರೇವಣ್ಣನಿಗೆ ಎಷ್ಟು ಸಲ ಜೈ ಜೈ ಅಂತ ಕೂಗಿದ್ರಿ. ಶಿವಲಿಂಗೇಗೌಡರಿಗೆ ಅಂತ ಒಂದು ಸಲ ಹೇಳಿದ್ರೆ ನಿಮ್ಮ ಗಂಟು ಹೋಗ್ತಿತ್ತಾ ಎಂದು ಪ್ರಶ್ನಿಸಿ, ಶಾಸಕರು ಬಹಿರಂಗ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ್ರು.

ಇನ್ನು, ಶಾಸಕರಿಗೆ ಜೈಕಾರ ಹಾಕದ ಯುವಕರಿಗೆ ಪ್ರಜ್ವಲ್ ರೇವಣ್ಣ ಬುದ್ಧಿ ಹೇಳಿದ್ದು, ಎಲ್ಲರೂ ಒಟ್ಟಿಗೆ ಇರಬೇಕು. ನಾನೇ ಶಿವಲಿಂಗಣ್ಣ ಅವರನ್ನ ಕರೆದುಕೊಂಡು ಬಂದಿದ್ದೇನೆ. ನಮ್ಮ ಕಡೆ ಇರಬಹುದು, ಬೇರೆ ಕಡೆಯಿಂದ ಇರಬಹುದು, ಗೊಂದಲ ಸೃಷ್ಟಿ ಮಾಡಬೇಡಿ. ದಯವಿಟ್ಟು ಪಕ್ಷ ಒಡೆಯುವ ಕೆಲಸ ಮಾಡಬೇಡಿ ಯುವ ಕಾರ್ಯಕರ್ತರು ಇದನ್ನ ಅರ್ಥ ಮಾಡಿಕೊಳ್ಳಿ ಎಂದು ಪ್ರಜ್ವಲ್‌ ರೇವಣ್ಣ ಮನವಿ ಮಾಡಿದ್ರು.

Exit mobile version