Site icon PowerTV

ಇಬ್ಬರು ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು : ಕಾಟನ್ ಪೇಟೆಯಲ್ಲಿ ಇಬ್ಬರು ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಸಂಜನಾ(30) ಮತ್ತು ಅರ್ಚನ(25) ಎಂಬುವವರ ಮೇಲೆ ನಿನ್ನೆ ತಡರಾತ್ರಿ ಇಬ್ಬರಿಂದ ಚಾಕು ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಸೆಕ್ಸ್ ವರ್ಕರ್ ಆಗಿರುವ ಇವರಿಗೆ ಕಾಟನ್ ಪೇಟೆಯ ಶಿವಾಸ್ ಲಾಡ್ಜ್ ನಲ್ಲಿ ನಡೆದಿದೆ.

ಸದ್ಯ ಗಾಯಳುಗಳಾದ ಮಂಗಳಮುಖಿಯರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಒಬ್ಬನನ್ನ ಕಸ್ಟಡಿಗೆ ಪೊಲೀಸರು ಪಡೆದುಕೊಂಡಿದ್ದಾರೆ.

Exit mobile version