Site icon PowerTV

ವಕೀಲೆ ಮೇಲೆ ಮಾರಣಾಂತಿಕವಾಗಿ ಹಲ್ಲೆ : ಆರೋಪಿ ಅಂದರ್​

ಬಾಗಲಕೋಟೆ : ಒಂದೆಡೆ ನಡುರಸ್ತೆಯಲ್ಲಿ ವಕೀಲೆ ಮೇಲೆ ಹಲ್ಲೆ ನಡೆದಿರುವ ವಿಡಿಯೋ ವೈರಲ್ ಆಗಿದ್ದು,  ಮತ್ತೊಂದೆಡೆ ಹಲ್ಲೆಗೆ ಒಳಗಾದ ವಕೀಲೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯ. ಇಂತಹ ಅಮಾನುಷ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಇನ್ನು, ಪೊಲೀಸರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಕೀಲೆ ಸಂಗೀತಾ ಸಿಕ್ಕೇರಿ ಹಾಗೂ ಪತಿಯಿಂದ ಮಾಹಿತಿ ಪಡೆದಿದ್ದಾರೆ. ಆದರೆ, ಆರೋಪಿ ಮಾತ್ರ ನಾನು ಹಲ್ಲೆ ಮಾಡಿಲ್ಲ.ಪೊಲೀಸರು ಸಂಗೀತಾ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನ್ನನ್ನು ಚಪ್ಪಲಿಯಿಂದ‌ ಹೊಡೆದು ,ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.ನಾನೂ ಪೊಲೀಸ್ ಠಾಣೆಗೆ ದೂರು ಕೊಡುವೆ ಎಂದು ಮಹಾಂತೇಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಬಾಗಲಕೋಟೆ ಜನತೆಯ ವಾಟ್ಸಪ್ ಗ್ರೂಪ್ ನಲ್ಲಿ ಅಟ್ಟಾಡಿಸಿ ಒದ್ದಿರುವ ವಿಡಿಯೋ ವೈರಲ್ ಆಗಿದೆ.ಆದರೆ, ಹಲ್ಲೆಗೊಳಗಾದ ಕುಟುಂಬ ಇನ್ನೂ ದೂರು ನೀಡಿಲ್ಲ. ಹಲ್ಲೆ ನಡೆಸಿದ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೊಳಗಾದವರ ದೂರಿಗಾಗಿ ಪೊಲೀಸರು ಕಾಯ್ತಿದ್ದಾರೆ.

Exit mobile version