Site icon PowerTV

ಮಕ್ಕಳಿಗೆ ಕಾಡುತ್ತಿದೆ ಟೊಮೆಟೊ ಜ್ವರ : ಲಕ್ಷಣಗಳೇನು ? ಚಿಕಿತ್ಸೆಯೇನು ?

ಬೆಂಗಳೂರು :  ನಾಲ್ಕನೇ ಅಲೆಯ ಭೀತಿಯ ನಡುವೆ ಹೊಸ ಜ್ವರವೊಂದು ಕಾಣಿಸಿಕೊಂಡಿದ್ದು. ವಿಶೇಷವಾಗಿ ಚಿಕ್ಕಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಹೆಚ್ಚು ಮಕ್ಕಳು ವೈರಸ್​​​ನಿಂದ ಸೋಂಕಿಗೆ ಒಳಗಾಗಿದ್ದಾರೆ.

ಕೇರಳ ರಾಜ್ಯವು ನಿಗೂಢ ಕಾಯಿಲೆ ಟೊಮ್ಯಾಟೋ ಜ್ವರದಿಂದ ಬೆಚ್ಚಿಬಿದ್ದಿದೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೂ ಅಪ್ಪಳಿಸಿಬಿಡ್ತಾ ಈ ಕಾಯಿಲೆ ಎಂಬ ಆತಂಕದಿಂದಲೇ ರಾಜ್ಯ ಆರೋಗ್ಯ ಇಲಾಖೆಗೆ ಕೊರೊನಾ ನಾಲ್ಕನೇ ಅಲೆ ಜೊತೆಗೆ ಟೊಮ್ಯಾಟೋ ಟೆನ್ಷನ್ ಕೂಡ ಜಾಸ್ತಿಯಾಗಿದೆ. ಇದರಿಂದಾಗಿ ಕರುನಾಡಿಗೆ ಸಾಂಕ್ರಾಮಿಕ ಜ್ವರ ಕಾಲಿಡದಂತೆ ಮಕ್ಕಳ ಆರೋಗ್ಯ ಸ್ಥಿತಿಗತಿ ಮೇಲೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಲಾಗಿದೆ.

ಟೊಮೆಟೊ ಜ್ವರದ ಲಕ್ಷಣಗಳೇನು?

  1. ಅಧಿಕ ಜ್ವರ, ಮೈಕೈ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ
  2. ಟೊಮೆಟೊ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೋ ಗಾತ್ರದ ಕೆಂಪು ದದ್ದುಗಳು ಕಂಡು ಬಂದಿವೆ.
  3. ಸೋಂಕಿತ ಮಗು ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಉಂಟಾಗುತ್ತದೆ
  4. ದದ್ದುಗಳ ಮೇಲೆ ಉಂಟಾಗುವ ಹುಣ್ಣುಗಳಿಂದ ಹುಳುಗಳು ಹೊರಬರುತ್ತವೆ
  5. ಮೈಮೇಲೆ ಕೆಂಪು ಬಣ್ಣದ ಗುಳ್ಳೆ
  6. ಚಳಿ ಜ್ವರ ಮೈಕೈ ನೋವು ಸಂಧಿಯೂತ
  7. ಆಯಾಸ,ವಾಕರಿಕೆ ಅತಿಸಾರ
  8. ಮೊಣಕಾಲು ವಿವಿಧ ಬಣ್ಣಕ್ಕೆ ತಿರುಗುತ್ತದೆ
  9. ಚಿಕನ್ ಗುನ್ಯಾ ಲಕ್ಷಣಗಳು ಬರಲಿವೆ

ಟೊಮೆಟೊ ಜ್ವರದ ಮುನ್ನೆಚ್ಚರಿಕೆ ಕ್ರಮಗಳೇನು?

Exit mobile version