Site icon PowerTV

ನಲಪಾಡ್​​ಗೆ ರಕ್ಷಾ ರಾಮಯ್ಯ ಕಿವಿಮಾತು

ಬೆಂಗಳೂರು : ದೊಡ್ಡವರ ಮಾತಿನ ನಡುವೆ ನಾವು ತಲೆ ಹಾಕುವುದು ಬೇಡ ಎಂದು ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಲಹೆ ನೀಡಿದ್ದಾರೆ.

ಮಾಜಿ ಸಂಸದೆ ರಮ್ಯಾ ಮತ್ತು ಎಂಬಿ ಪಾಟೀಲ್ ವಿಚಾರವಾಗಿ ನಲಪಾಡ್ ಅವರು ಮಾತನಾಡಿದ್ದರು. ಇದಕ್ಕೆ ನಟಿ ರಮ್ಯಾ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ರಕ್ಷಾ ರಾಮಯ್ಯ ಅವರು ಟ್ವಿಟ್​​ ಮೂಲಕ ಪ್ರತಿಕ್ರಿಯಿಸಿದ್ದು, ದೊಡ್ಡವರ ಮಾತಿನ ನಡುವೆ ನಾವು ತಲೆ ಹಾಕುವುದು ಬೇಡ. ಅವರು ಮಾತನಾಡುವುದು ಆಂತರಿಕ ವಿಷಯವಾಗಿದೆ. ಇದನ್ನು ನಾವು ವಿಮರ್ಶೆ ಮಾಡಿದರೆ ಬೇರೆ ಅರ್ಥ ಆಗುತ್ತದೆ. ಹೀಗಾಗಿ ಚಿಕ್ಕವರು ಸಾರ್ವಜನಿಕವಾಗಿ ಮಾತನಾಡುವುದು ಬೇಡ ಎಂದ ನಲಪಾಡ್​​​ಗೆ ಕಿವಿಮಾತು ಹೇಳಿದ್ದಾರೆ.

Exit mobile version