Site icon PowerTV

ಬಿಜೆಪಿಗರೇ ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ : ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ : ರಮ್ಯಾ ಡಿಕೆಶಿ ವಿರುದ್ದವಾಗಿ ಟ್ವೀಟ್​​​ ಮಾಡಿದ್ದು, ಅದಕ್ಕೆ ಕಾಂಗ್ರೆಸ್​​ ನಾಯಕರು ಬೆಂಬಲ ನೀಡುತ್ತಿದ್ದಾರೆ. ಇದೀಗ ಎಲ್ಲರ‌ ಮನೆ‌ ದೋಸೆ ಕೂಡ ತೂತೆ ಇರುತ್ತದೆ ಎಂದು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ರಮ್ಯ ಪರವಾಗಿ ಬ್ಯಾಟ್​​​​​ ಬೀಸಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಮ್ಯಾ ಅವರು ಪಕ್ಷಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಸಂಸದರ ಆಗಿ ಕೆಲಸ ಮಾಡಿದ್ದಾರೆ, ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ನಿಮ್ಮ ತಟ್ಟೆಯಲ್ಲೆ ಹೆಗ್ಗಣ ಬಿದ್ದಿದೆ ಅದನ್ನ ನೋಡಿಕೊಳ್ಳಿ. ನಮ್ಮ ಬಗ್ಗೆ ಚಿಂತೆ ಮಾಡೋದನ್ನ ಕಡಿಮೆ ಮಾಡಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕಾಂಗ್ರೆಸ್​​ ವಿರುದ್ಧ ಇಷ್ಟೆಲ್ಲಾ ಮಾತನಾಡುತ್ತಿರುವ ಬಿಜೆಪಿಯವರು ಯತ್ನಾಳ ವಿರುದ್ದ ಕಟೀಲ್ ಏನು ಕ್ರಮ ತೆಗೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ಸಿಡಿ ಕೊಟ್ಟರೆ ಮಂತ್ರಿ ಆಗ್ತಾರೆ ? ಮತ್ತೆ ಸಂಪುಟ ರಚನೆ ಸಮೀಪ ಬಂದಾಗ ಸಿಡಿ ರೆಡಿ ಆಗುತ್ತವೆ, ಇದು ನನ್ನ ಹೇಳಿಕೆಯಲ್ಲ, ಅವರ ನಾಯಕರೆ ಹೇಳ್ತಾರೆ ಎಂದರು.

ಯಾರ್ಯಾರ ಸಿಡಿ ಏನೇನು ರೇಡಿ ಆಗ್ತಿದೆ ಅಂತಾ ಅವರಿಗೆ ಗೊತ್ತು. ಇದು ನನ್ನ ಹೇಳಿಕೆ ಅಂತಾ ಹಾಕಬೇಡಿ. ಅವರ ಪಕ್ಷದವರೇ  ಹೇಳಿರೋದನ್ನ ನಾನು ಹೇಳ್ತಾ ಇರೋದು. ಇಲ್ಲ ಅಂದ್ರೆ ಇದಕ್ಕೆ ಮತ್ತೆ ನನಗೆ ನೋಟಿಸ್ ಕೊಡ್ತಾರೆ, ಅಲ್ಲದೇ ಯಾರ್ಯಾರ ಸಿಡಿ ಇದೆ ತಂದು ಕೊಡಿ ಎಂದು ನನ್ನೇ ಕೇಳ್ತಾರೆ ಎಂದು ಹೇಳಿದರು.

Exit mobile version