Site icon PowerTV

BSY ನಂಬಿ ಬಂದಿದ್ದಕ್ಕೆ ಎಲ್ಲವೂ ಸಿಕ್ತು : ಸಚಿವ ಮುನಿರತ್ನ

ಬೆಂಗಳೂರು : ಮಾಜಿ ಸಿ ಎಂ ಯಡಿಯೂರಪ್ಪನವರು ನಮಗೇನು‌ ಅನ್ಯಾಯ ಮಾಡಿಲ್ಲ, ನಂಬಿ ಬಂದಿದ್ದಕ್ಕೆ ಎಲ್ಲವನ್ನೂ ಕೊಟ್ಟಿದ್ದಾರೆ ಎಂದು ವಿಕಾಸಸೌಧದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

ಸಂಪುಟ ವಿಸ್ತರಣೆ,ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪನವರು ನಮಗೇನು‌ ಅನ್ಯಾಯ ಮಾಡಿಲ್ಲ. ಎಲ್ಲಿಯೂ ನಮಗೆ ಮೋಸ ಮಾಡಿಲ್ಲ. ಬಂದವರಿಗೆಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ವರಿಷ್ಠರು ಯಾವ ತೀರ್ಮಾನ ಮಾಡ್ತಾರೆ ಮಾಡಲಿ. ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಅದುವಲ್ಲದೇ ಕರ್ನಾಟಕ್ಕೆ ಸಿಎಂ ಬೊಮ್ಮಾಯಿ ಒಬ್ಬರೇ ಸಾಕು. ಅವರಷ್ಟು ಉತ್ತಮ ಕೆಲಸ ಯಾರೂ‌ ಮಾಡುತ್ತಿಲ್ಲ. ಅವರನ್ನ ಬಿಟ್ಟು ಇನ್ಯಾರು ಬೇಕಿಲ್ಲ. ಅಭಿಮಾನದಿಂದ ಸಭೆಗಳನ್ನ ಮಾಡುತ್ತಾರೆ. ಸಿಎಂ ಅವರೇ ಉಸ್ತುವಾರಿ ನೋಡಿಕೊಳ್ಳಲಿ ಬೇರೆ ಯಾರಿಗೂ ಬೇಡ. ಹಾಗೂ ಅಶೋಕ್ ಅವರು ಹಿರಿಯ ಸಚಿವರಾಗಿದ್ದಾರೆ ಸಾಕು ಎಂದು ಬೆಂಗಳೂರು ಉಸ್ತುವಾರಿ ಬಗ್ಗೆ ಮಾತನಾಡಿದರು.

ಇನ್ನು ಇದೇ ವೇಳೆ ರಮ್ಯಾ, ಡಿಕೆಶಿ ಟ್ವೀಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮ್ಯಾ ಅವರು ಉತ್ತಮ ನಟಿ. ನಿರ್ಮಾಪಕನಾಗಿ ಅವರ ಮೇಲೆ ಉತ್ತಮ ಅಭಿಪ್ರಾಯವಿದೆ. ನಾನು ಇವತ್ತಿಗೂ ನಿರ್ಮಾಪಕನೇ ಎಂದರು.

ರಮ್ಯಾ ಅವರಿಗೆ ಚಿತ್ರದಲ್ಲಿ ಅವಕಾಶ ಕೊಡ್ತೀರ ಎಂಬ ಪ್ರಶ್ನೆಗೆ ಉತ್ತರಿಸಿ, ಮಾಡಬೇಕು ಸಮಯದ ಆಭಾವವಿದೆ. ಚುನಾವಣೆಗೆ ಒತ್ತು ಕೊಡಬೇಕಿದೆ. ಆದ್ದರಿಂದ ನಾನು ಇದಕ್ಕಿಂತ ಹೆಚ್ಚಿನದನ್ನೇನು ಮಾತನಾಡಲ್ಲ ಎಂದು ಮುನಿರತ್ನ ಪ್ರತಿಕ್ರಿಯಿಸಿದರು.

Exit mobile version