Site icon PowerTV

ಶ್ರೀಲಂಕಾ ದಿವಾಳಿತನ ಹಿನ್ನೆಲೆ ಕರಾವಳಿ ಭಾಗದಲ್ಲಿ ಹೈಅಲರ್ಟ್​ ಘೋಷಣೆ

ಮಂಗಳೂರು: ಸಮುದ್ರ ಮೂಲಕ ದೇಶದ ಗಡಿಯೊಳಗೆ ಶ್ರೀಲಂಕನ್ನರು ಒಳನುಸುಳುವ ಸಾಧ್ಯತೆ ಇರುವುದರಿಂದ ಮಂಗಳೂರಿನಲ್ಲಿ ಹೈಅಲರ್ಟ್​ ಫೋಷಿಸಿದ್ದಾರೆ.

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ವಿಚಾರದಲ್ಲಿ ಸಮುದ್ರ ಮಾರ್ಗದ ಮೂಲಕ ಶ್ರೀಲಂಕನ್ನರು ಒಳನುಸುಳುವ ಭೀತಿಯಲ್ಲಿ ಕರಾವಳಿಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಹಾಗೆನೆ ಅವರು ದಕ್ಷಿಣ ಭಾರತಕ್ಕೆ ಕಾಲಿರಿಸುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಕೇಂದ್ರ ಬೇಹುಗಾರಿಕಾ ಸಂಸ್ಥೆಗಳು ದೇಶದ ಕರಾವಳಿ ಉದ್ದಕ್ಕೂ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಸಮುದ್ರ ಮಾರ್ಗದ ಮೂಲಕ ಒಳನುಸುಳುವ ಭೀತಿಯಿದ್ದು, ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ.

ಕರಾವಳಿ ಕಾವಲು ಪಡೆಯಿಂದ ಸಮುದ್ರದಲ್ಲಿ ನಿಗಾ ಇಡಲಾಗಿದ್ದು, ನೌಕಾಪಡೆ, ಕೋಸ್ಟ್ ಗಾರ್ಡ್ ಕೂಡ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ತಮಿಳಿಗರ ಸೋಗಿನಲ್ಲಿ ಶ್ರೀಲಂಕಾ ನಿರಶ್ರಿತರು ಒಳ ನುಸುಳಬಹುದು. ಸಿಎಸ್​​ಪಿ ದಳದ ಬೋಟ್‌ಗಳು ಸಮುದ್ರದಲ್ಲಿ ನಿರಂತರ ಕಾವಲು ಕಾಯುತ್ತಿದ್ದಾರೆ. ಹಾಗೆನೇ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

Exit mobile version