Site icon PowerTV

ನಲಪಾಡ್ ಹ್ಯಾರಿಸ್​ಗೆ ಮಾಜಿ ಸಂಸದೆ ರಮ್ಯಾ ತಿರುಗೇಟು

ಬೆಂಗಳೂರು: ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹ್ಯಾರಿಸ್ ಹೇಳಿಕೆ  ನೀಡಿದ್ದು, ರಮ್ಯಾ ಇಷ್ಟು ವರ್ಷ ಎಲ್ಲಿದ್ದರು? ಸಡನ್ನಾಗಿ ಯಾಕೆ ಬಂದರು? ತಮ್ಮ ಅಸ್ತಿತ್ವ ತೋರಿಸಲು ಅವರು ಬಂದಿದ್ದಾರಾ ಅಥವಾ ನಾನು ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ ಎಂದು ಪ್ರಶ್ನಿಸಿದರು ( ? ) ಅಥವಾ ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ಅವರು ಬಂದಿದ್ದಾರ  ( ? ) ಎನಿಸುತ್ತಿದೆ ಎಂದಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ರಮ್ಯಾ, ಜಾಮೀನಿನ ಮೇಲೆ ಹೊರಗಿರುವ ಈ ಹುಡುಗ ಯುವ ಕಾಂಗ್ರೆಸ್‌ನ ಗೌರವಾನ್ವಿತ ಅಧ್ಯಕ್ಷರು, ಶಾಸಕ ಎನ್‌ಎ ಹ್ಯಾರಿಸ್‌ ಅವರ ಪುತ್ರ. ಅವರು ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಇದು ಅದ್ಭುತ ಎಂದಿದ್ದಾರೆ. ಅಲ್ಲದೇ ನಲಪಾಡ್‌ ವಿರುದ್ಧ ಕೇಳಿಬಂದಿರುವ ಆರೋಪಗಳ ವರದಿಗಳನ್ನು ಕೂಡ ಲಗತ್ತಿಸಿದ್ದಾರೆ ಟ್ವಿಟರ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

Exit mobile version