Site icon PowerTV

ಡಿಕೆಶಿಗೆ ಶೇಪ್ ಔಟ್ ಆಗಿದೆ : ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಳ ಬಿಲ್ಡಪ್ ಕೊಡ್ತಾ ಇದ್ದರು. ಆದರೆ, ಒಂದು ಹೆಣ್ಣು ಮಗಳಿಂದ ಅವರಿಗೆ ಈಗ ಶೇಪ್ ಔಟ್ ಆಗಿದೆ ಎಂದು ಡಿಕೆಶಿಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ.

ಡಿಕೆಶಿ ವಿರುದ್ಧ ರಮ್ಯಾ ಕಿಡಿ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾತನಾಡಿದ ಅವರು, ಡಿಕೆಶಿಗೆ ಶೇಪ್ ಔಟ್ ಆಗಿದೆ. ತಾನು ಯಾರಿಗೆ ಬೇಕಾದರೂ ತಾಗ್ತೀನಿ ಅಂತ ಬಿಲ್ಡಪ್ ಕೊಡ್ತಾ ಇದ್ದರು. ಆದರೆ, ಈಗ ಅವರಿಗೆ ಶೇಪ್ ಔಟ್ ಆಗಿದೆ ಎಂದು ವ್ಯಂಗ್ಯವಾಡಿದರು.

ಇನ್ನು ರಮ್ಯ ಟ್ವೀಟ್ ಬಳಿಕ ಸಾಕಷ್ಟು ಕಾಂಗ್ರೆಸ್ ನಾಯಕರು ಅವರಿಗೆ ಟೀಕೆ ಮಾಡಿದ್ದಾರೆ. ಇಂಥವರು ನಮ್ಮ ಅಧ್ಯಕ್ಷರಾ ಅಂತ ಮುಜುಗರ ಅನುಭವಿಸುತ್ತಿದ್ದಾರೆ. ಅಲ್ಲದೆ ಅವರು ನನ್ನನ್ನು ಡಿಸ್ಟ್ರಕ್ಟ್ ಮಾಡ್ತೀನಿ ಅಂತ ಹೊರಟಿದರು, ಆದರೆ ಈಗ ಅವರೇ ಡಿಸ್ಟ್ರಕ್ಟ್ ಆಗಿ ಐಸೋಲೇಟ್ ಆಗಿದ್ದಾರೆ. ರಮ್ಯ ಪಾಪ ಹೆಣ್ಣು ಮಗಳು, ಅವರ ಬಗ್ಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕಾಲೆಳೆದರು.

Exit mobile version