Site icon PowerTV

ಯುವಕನ ಮೇಲೆ ಮುರಿದು ಬಿತ್ತು ಮರದ ಕೊಂಬೆ : ಪ್ರಾಣಾಪಾಯದಿಂದ ಪಾರು

ಮಂಗಳೂರು: ಕಡಬದ ಮುಖ್ಯಪೇಟೆಯಲ್ಲಿ ಸುನಿಲ್ ಎಂಬ ಯುವಕನ ಮೇಲೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಅದೃಷ್ಟ ಎಂಬಂತೆ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಕಡಬದ ಸ್ವಸ್ತಿಕ್ ಪೈಪ್ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಹಿಂಬದಿಗೆ ಬರಲು ಸೈಡ್ ಹೇಳುತ್ತಿದ್ದ ವೇಳೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ಮರದಿಂದ ಒಣಗಿದ ಕೊಂಬೆಯೊಂದು ಮುರಿದು ಸುನಿಲ್ ಮೇಲೆ ಬಿದ್ದಿದೆ.

ಕೊಂಬೆ ಬಿದ್ದ ತಕ್ಷಣ ಸಣ್ಣಪ್ರಮಾಣದಲ್ಲಿ ಗಾಯಗೊಂಡ ಸುನಿಲ್ ಅವರನ್ನು ಸ್ಥಳೀಯರು ಉಪಚರಿಸಿ,ನಂತರದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅದೃಷ್ಟವಶತ್ ಯಾವುದೇ ರೀತಿಯಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ.ಈ ದೃಶ್ಯಾವಳಿಗಳು ಸ್ಥಳೀಯ ಸಿಸಿ ಟಿವಿಯೊಂದರಲ್ಲಿ ಸೆರೆಯಾಗಿದೆ.

Exit mobile version