Site icon PowerTV

ಸರ್ಕಾರದ ವಿರುದ್ಧ ನಲಪಾಡ್ ಹ್ಯಾರಿಸ್ ಕಿಡಿ

ಮಡಿಕೇರಿ : ಕೋವಿಡ್‌ನಿಂದಾಗಿ ಆದ ಸಾವು ನೋವಿಗೆ ಅಂದಿನ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಯ್ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ವಾಗ್ದಾಳಿ  ನಡೆಸಿದ್ದಾರೆ.

ಕೊರೋನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಭ್ರಷ್ಟಾಚಾರವೆಸಗಿದೆ ಎಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್​​ನಿಂದಾಗಿರುವ ಸಂಕಷ್ಟವನ್ನು ಮರೆತಿದ್ದೇವೆ. ಸಾವಿನ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದರು.

ಇನ್ನು ಕೋವಿಡ್​​ ಮೃತಪಟ್ಟವರಿಗಾಗಿ ಪರಿಹಾರ ನೀಡಬೇಕೆಂಬ ಕಾರಣಕ್ಕೆ ಕಡಿಮೆ ಸಂಖ್ಯೆ ತೋರಿಸಿದ್ದಾರೆ. 47 ಲಕ್ಷ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. WHO ನ ವರದಿಗೂ ಸರ್ಕಾರ ವರದಿಗೂ ವ್ಯತ್ಯಾಸ ಇದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಹೇಳಿದರು.

ಕೊಡಗಿನ ಶಾಸಕರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದೊಂದು 40% ಸರ್ಕಾರ ಕೆಲಸ ಸಿಗದೆ ಯುವ ಜನತೆ ಸಾವಿಗೆ ಶರಣಾಗುತ್ತಿದ್ದಾರೆ. ಇದರಿಂದ ಉಡುಪಿಯಲ್ಲಿ MBA ವಿದ್ಯಾರ್ಥಿನಿ ಕೆಲಸ ಸಿಗದೆ ಪ್ರಾಣ  ಕಳೆದುಕೊಂಡಿದ್ದಾಳೆ ಎಂದು ನಲಪಾಡ್ ಹ್ಯಾರಿಸ್ ಆರೋಪಿಸಿದರು.

Exit mobile version