Site icon PowerTV

ಎಂಬಿ ಪಾಟೀಲ್ ಬಗ್ಗೆ ಡಿಕೆಶಿ ಹೇಳಿಕೆ ಅಚ್ಚರಿ ತಂದಿದೆ : ನಟಿ ರಮ್ಯಾ ಟ್ವಿಟ್​​

ಬೆಂಗಳೂರು : ಮಾಜಿ ಸಚಿವ ಎಂ ಬಿ ಪಾಟೀಲ್ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ​​ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿದೆ ಎಂದು ನಟಿ ರಮ್ಯಾ  ಟ್ವಿಟ್​​ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅಶ್ವತ್ಥ್ ನಾರಾಯಣ್ ಅವರು ರಕ್ಷಣೆಗೋಸ್ಕರ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿರುವ ಸಾಧ್ಯತೆ ಇದೆ ಎಂಬ  ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಅಲ್ಲದೇ  ಎಂ.ಬಿ. ಪಾಟೀಲ್ ಕಾಂಗ್ರೆಸ್ ಕಟ್ಟಾಳು ನಾಯಕರಾಗಿದ್ದಾರೆ ಎಂದು ತಮ್ಮ ಪಕ್ಷದ ನಾಯಕರ ಹೇಳಿಕೆಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ.

”ಪಕ್ಷಾತೀತವಾಗಿ ಜನರು ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರು ಕುಟುಂಬಗಳಲ್ಲಿ ಮದುವೆಯೂ ಆಗುತ್ತಾರೆ. ಪಕ್ಷ ಭೇದ ಮರೆತು ಅನೇಕ ನಾಯಕರು ಒಟ್ಟಿಗೆ ಸಮಾರಂಭಗಳಿಗೆ ಹೋಗುವುದು ಸಹಜ.  ಬೇರೆ ಬೇರೆ ಪಕ್ಷಗಳಲ್ಲಿರುವ ನಾಯಕರು ಎರಡೂ ಕುಟುಂಬಗಳ ನಡುವೆ ಮದುವೆ ಸಂಬಂಧ ಬೆಳೆಸಿರುವ ಉದಾಹರಣೆ ಇದೆ. ಇಂತಹ ಸಂದರ್ಭದಲ್ಲಿ​​ ಅವರ ಹೇಳಿಕೆ ನನಗೆ ಆಶ್ವರ್ಯ ಮೂಡಿಸಿದೆ. ಮತ್ತು ಚುನಾವಣಾ ಹೊತ್ತಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಟ್ವೀಟ್​ ಮಾಡಿದ್ದಾರೆ.

Exit mobile version