Site icon PowerTV

ತಪ್ಪು ಮಾಡದೇ ಜೈಲಿಗೆ ಹೋದರೆ ಅದೊಂದು ಶಕ್ತಿ ಆಗುತ್ತೆ : ಸಿ.ಟಿ.ರವಿ

ಚಿಕ್ಕಮಗಳೂರು : ದೇಶದ ಜನರೇ ಕಾಂಗ್ರೆಸ್​​ನ ಟಾರ್ಗೆಟ್ ಮಾಡಿದ್ದಾರೆ, ನಾವು ಡಿ ಕೆ ಶಿವಕುಮಾರ್​​ ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರೋಧ ಪಕ್ಷದ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ತಮ್ಮನ್ನ ತಾವು ವೈಭವೀಕರಿಸಿಕೊಳ್ಳಬಹುದು. ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ. ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕನಕಪುರದಲ್ಲಷ್ಟೆ ಹೊರತು ಬೇರೆ ಕಡೆ ಮಾಡಿಲ್ಲ. ಉಪ್ಪು ತಿಂದವರು  ನೀರು ಕುಡಿಯಲೇ ಬೇಕು, ಹಾಗೇ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ಅವರು ಏನೂ ತಪ್ಪು ಮಾಡಿಲ್ಲ ಅಂದ್ರೆ ಆತಂಕ ಪಡುವ ಅವಶ್ಯಕತೆ ಇಲ್ಲ. ರಾಜಕೀಯದಲ್ಲಿ ಇದ್ದೇನೆಂದು ಶೆಲ್ಟರ್ ತೆಗೆದುಕೊಳ್ಳಲು ಆಗಲ್ಲ. ತಪ್ಪುಮಾಡದೆ ಜೈಲಿಗೆ ಹೋದರೆ ಅದೊಂದು ಶಕ್ತಿ ಆಗುತ್ತದೆ. ತಪ್ಪು ಮಾಡಿದವರದ್ದು ರಾಜಕೀಯ ಜೀವನ ಅಂತ್ಯ ಆಗುತ್ತದೆ ಎಂದರು.

ಇನ್ನು ಯುಪಿಯಲ್ಲಿ ಮೈ ಲಡಕಿ ಹೂಂ, ಲಡ್ ಸಕ್ತಾ ಹೈ ಹೇ ಅಂತ ಪ್ರಿಯಾಂಕ ಗಾಂಧಿ ನೇತೃತ್ವ ಚುನಾವಣೆ ವಹಿಸಿದರು ಏನಾಯ್ತು?  387 ಕ್ಷೇತ್ರದಲ್ಲಿ ಕಾಂಗ್ರೆಸ್ ಡೆಪಾಸಿಟ್ ಹೋಯ್ತು. ಅವರೇ ಅಧಿಕಾರದಲ್ಲಿದ್ದ ಪಂಜಾಬ್​​ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿ ನಾಯಕರಿಗೆ ರೆಡ್ ಕಾರ್ಪೇಟ್ ಹಾಸಿ ಕರಕೊಂಡು ಬಂದು ಕುರಿಸಿದರು. ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವಾಗ ಡಿಕೆಶಿ ಟಾರ್ಗೆಟ್ ಮಾಡಿ ಏನಾಗಬೇಕು ? ಎಂದು ಗುಡುಗಿದರು.

Exit mobile version