Site icon PowerTV

ಕೇರಳದಲ್ಲಿ ವಿಶ್ವವಿಖ್ಯಾತ ತ್ರಿಸೂರು ಪೂರಂ ಸಂಭ್ರಮ

ಕೇರಳದ ಜನಪ್ರಿಯ ಹಬ್ಬ ಹಾಗೂ ವಿಶ್ವ ಪ್ರಸಿದ್ಧ ‘ತ್ರಿಶೂರು ಪೂರಂ ಉತ್ಸವ’ದ ವೈಭೋಗವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸ್ಥಳೀಯರಷ್ಟೇ ಅಲ್ಲದೇ ದೇಶಿಯ ಹಾಗೂ ವಿದೇಶಿ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಾರೆ. ಎರಡು ದಿನಗಳ ತ್ರಿಶೂರು ಪೂರಂ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು ದಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.

ಈ ಹಬ್ಬವನ್ನು ವಡಕ್ಕುಂನಾಥ ದೇವಸ್ಥಾನದ ಅಂಗಳದಲ್ಲಿ ಆಚರಿಸಲಾಗುತ್ತದೆ. ಹಬ್ಬದ ವೈಶಿಷ್ಟವೆಂದರೆ, ಅಲಂಕೃತ ಆನೆಗಳ ಉತ್ಸವ ಮತ್ತು ವೇಗವಾಗಿ ಬದಲಾಗುವ ತಾಳಕ್ಕೆ ನಡೆಯುವ ಕುಡಮಾಟ್ಟಂ ಸ್ಪರ್ಧೆ, ಕೊಡೆಯ ಉತ್ಸವ, ಚೆಂಡೆಮೇಳಂ ಮತ್ತು ಪಂಚವಾದ್ಯಗಳ ಸಂಗೀತ ಸಿರಿ ಉತ್ಸವದ ಪ್ರಮುಖ ಆಕರ್ಷಣೆ. ಕೊನೆಯ ದಿನ ವರ್ಣರಂಜಿತ ಪಟಾಕಿಗಳನ್ನು ಆಕಾಶದಲ್ಲಿ ಸಿಡಿಸುವ ಮೂಲಕ ಎರಡು ದಿನಗಳ ಮಹಾನ್ ಉತ್ಸವ ಕೊನೆಗೊಳ್ಳುತ್ತದೆ. ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ತ್ರಿಶೂರು ಪೂರಂ ಉತ್ಸವವನ್ನು ಆಚರಣೆ ಮಾಡಿರಲಿಲ್ಲ. ಕೇವಲ ಸಾಂಕೇತಿಕವಾಗಿ ಆಚರಣೆ ಮಾಡಲಾಗಿತ್ತು.

Exit mobile version