Site icon PowerTV

ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವಪ್ರಸಿದ್ಧ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಮೃಗಾಲಯದಲ್ಲಿ ಹುಲಿ ಮರಿಗಳಿಗೆ ಜನ್ಮ ನೀಡಿದ್ರೆ, ಮತ್ತೊಂದು ಕಡೆ ಯುದ್ಧ ಪೀಡಿತ ಉಕ್ರೇನ್​​ನ ಎರಡು ಸ್ಪೇಷಲ್ ಗೆಸ್ಟ್ ಮೃಗಾಲಯಕ್ಕೆ ಬರಲು ಸಜ್ಜಾಗಿವೆ.

ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬರೋಬ್ಬರಿ ಒಂಬತ್ತು ವರ್ಷಗಳ ನಂತ್ರ ಮೃಗಾಲಯದಲ್ಲಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ಮೃಗಾಲಯದ ಬಿಳಿ ಹುಲಿ ತಾರಾ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯಕರವಾಗಿವೆ. ಗಂಡು ಹುಲಿ ರಾಕಿ ಜೊತೆ ಹೆಣ್ಣು ಹುಲಿ ತಾರಾಗೆ ಬ್ರೀಡ್ ಮಾಡಿಸಲಾಗಿತ್ತು. ಬೇರೆ ಬೇರೆ ಮೃಗಾಲಯಕ್ಕೆ ಪ್ರಾಣಿಗಳ ವಿನಿಮಯದ ಅಡಿಯಲ್ಲಿ ಹುಲಿ ಮರಿಗಳನ್ನ ನೀಡಲು ಬ್ರೀಡ್ ಮಾಡಿಸಲಾಗಿದ್ದು, ಮೂರು ತಿಂಗಳ ಬಳಿಕ ಹುಲಿ ಮರಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಸದ್ಯ ಮೃಗಾಲಯದಲ್ಲಿ 16 ಹುಲಿಗಳಿದ್ದು ಮೈಸೂರು ಮೃಗಾಲಯ ಹುಲಿ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಾಗಿದೆ.

ಇನ್ನೂ, ಯುದ್ಧ ಪಿಡಿತ ಉಕ್ರೇನ್ ನಲ್ಲಿರೊ ಪ್ರಾಣಿಗಳಿಗೆ ಆಶ್ರಯ ನೀಡಲು ಮೈಸೂರು ಮೃಗಾಲಯ ಮುಂದಾಗಿದೆ. ಯುದ್ಧ ಪೀಡಿತ ಉಕ್ರೇನ್ ನಲ್ಲಿರೊ ವಿದೇಶಿಗರು ವಾಪಸ್ ತಮ್ಮ ತವರಿಗೆ ಮರುಳುತ್ತಿದ್ದಾರೆ. ಉಕ್ರೇನ್ ನಲ್ಲಿ ನೆಲೆಸಿರೋ ಆಂದ್ರ ಮೂಲದ ಪಾಟೀಲ ಎಂಬುವವರು ತಮ್ಮ ತವರಿಗೆ ಮರಳಲು ಸಜ್ಜಾಗಿದ್ದಾರೆ. ಹೀಗಾಗಿ ಉಕ್ರೇನ್ ನಲ್ಲಿ ನೆಲೆಸಿರೋ ಡಾ. ಪಾಟೀಲ್ ತಾವು ಸಾಕಿರೋ ಒಂದು ಬ್ಲಾಕ್ ಫ್ಯಾಂಥರ್, ಹಾಗೂ ಜಗ್ವಾರ್ ಭಾರತ ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ
ಹೀಗಾಗಿ ಮೈಸೂರು ಮೃಗಾಲಯಕ್ಕೆ ನೀಡಲು ಆಯ್ಕೆ ಮಾಡಿಕೊಂಡಿದೆಯಂತೆ.

ಒಟ್ಟಿನಲ್ಲಿ, ಪ್ರಾಣಿಗಳ ಸಂತಾನೋತ್ಪತ್ತಿ, ವಾಸಕ್ಕೆ ಮೈಸೂರು ಮೃಗಾಲಯ ಪೂರಕವಾಗಿದ್ದು, ಹುಲಿ ಮರಿಗಳ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಿ, ಬ್ಲಾಕ್ ಫ್ಯಾಂಥರ್, ಜಾಗ್ವಾರ್ ಮೃಗಾಲಯಕ್ಕೆ ಬಂದ್ರೆ ಪ್ರವಾಸಿಗರ ಆಕರ್ಷಣೆ ಮತ್ತಷ್ಟು ಹೆಚ್ಚಲಿದೆ.

Exit mobile version