Site icon PowerTV

ಮನೆ ಮುಂದೆ ನಿಂತ ಕಾರುಗಳ ಮೇಲೆ ಪುಂಡರ ಅಟ್ಟಹಾಸ

ಶಿವಮೊಗ್ಗ : ಮುಸುಕು ಧರಿಸಿ ಬಂದ ದುಷ್ಕರ್ಮಿಗಳ ತಂಡವೊಂದು ಮನೆಗಳ ಮುಂದೆ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜುಗಳನ್ನು ದೊಣ್ಣೆಯಿಂದ ಒಡೆದು ಪುಡಿ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಊರುಗಡೂರು ಬಡಾವಣೆಯಲ್ಲಿಯೇ ಈ ದುಷ್ಕೃತ್ಯ ಮತ್ತೆ ನಡೆದಿದ್ದು, ಮೇ 9 ರ ಮುಂಜಾನೆ ಸುಮಾರು 2.30 ರ ವೇಳೆಗೆ ಈ ಘಟನೆ ನಡೆದಿದೆ. ಕಿಡಿಗೇಡಿಗಳು ಪುನಃ ಉದ್ದೇಶಪೂರ್ವಕವಾಗಿಯೇ ಬಂದು ಈ ಕೃತ್ಯ ಎಸಗಿದ್ದಾರೆ. ಈ ದೃಶ್ಯ ಪಕ್ಕದ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಶುಕ್ರವಾರ ಊರುಗಡೂರಿನ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆದಾದ ಬಳಿಕ ಅಲ್ಲಿನ ಮನೆಗಳು, ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು.

ಶಿವಮೊಗ್ಗದಲ್ಲಿ ಹರ್ಷನ ಹತ್ಯೆಯ ಬಳಿಕ ಸಾಕಷ್ಟು ಘಟನಾವಳಿಗಳು ನಡೆದಿದ್ದು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತೀಕ್ಷ್ಣವಾದ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಕೂಡ, ಇಂತಹ ಘಟನೆಗಳು ಪುನರಾವರ್ತಿತವಾಗುತ್ತಿದೆ. ಊರುಗಡೂರಿನಲ್ಲಿ ಚಾನಲ್ ದಾಟಿ ನಾಲ್ವರು ದುಷ್ಕರ್ಮಿಗಳು ಮುಸುಕು ಧರಿಸಿ ಬಂದಿದ್ದು, ರಾಡ್ ನಿಂದ ದಾಳಿ ನೇಸಿ, ಮೂರು ಕಾರುಗಳನ್ನ ಜಖಂಗೊಳಿಸಿದ್ದಾರೆ. ಈ ಕೃತ್ಯ ಸಿಸಿ ಟಿವಿಯಲ್ಲಿ ಕವರ್ ಆಗಿದೆ. ಈ ನಾಲ್ಕು ಜನರಲ್ಲಿ ಒಬ್ಬನ ಪತ್ತೆಯಾಗಿದ್ದು, ಸದ್ಯದಲ್ಲೇ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಲು ಕ್ರಮ ಜರುಗಿಸಿದ್ದು, ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version