Site icon PowerTV

PSI SCAM: ಮಂಜುನಾಥ್ ಮೇಳಕುಂದಿ ಮೊಬೈಲ್​​ನಲ್ಲಿದ್ಯಾ ಅಕ್ರಮದ ಸೀಕ್ರೆಟ್..?

ಕಲಬುರಗಿ : ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಸಿಐಡಿಗೆ ದಾಖಲಾಗುತ್ತಿದ್ದಂತೆಯೇ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ ತನ್ನ ಮೊಬೈಲ್ ಅನ್ನು ಜಲಾಶಯಕ್ಕೆ ಬಿಸಾಕಿರುವ ಪ್ರಸಂಗ ನಡೆದಿದೆ.

ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಐಡಿ ಕಸ್ಟಡಿಯಲ್ಲಿರೋ ಆರೋಪಿ ಮೇಳಕುಂದಿ. ನೇಮಕಾತಿ ಪರೀಕ್ಷೆ ಅಕ್ರಮ ಎಸಗಿ ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಾನೆ.

ಕಲಬುರಗಿ ನೀರಾವರಿ ಇಲಾಖೆಯ ಅಮರ್ಜಾ ಡ್ಯಾಂ ಇಂಜಿನಿಯರ್ ಆಗಿರೋ ಮಂಜುನಾಥ್, ಪರೀಕ್ಷೆ ಅಕ್ರಮ ಸಾಕ್ಷಿ ನಾಶ ಪಡಿಸಲು ಮೊಬೈಲ್​​ನ್ನು ಡ್ಯಾಂ ನಲ್ಲಿ ಎಸೆದಿದ್ದಾನೆ. ಇದೀಗ ಆ ಮೊಬೈಲ್​​ಗಾಗಿ ಸಿಐಡಿ ತನಿಖಾ ತಂಡ ತೀವ್ರ ಶೋಧ ನಡೆಸಿದ್ದು, ಡಿವೈಎಸ್ ಪಿ ಪ್ರಕಾಶ್ ರಾಠೋಡ ನೇತೃತ್ವದಲ್ಲಿ ಐದು ಜನ ಸ್ವಿಮ್ಮಿಂಗ್ ಮುಳುಗುತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.

Exit mobile version