Site icon PowerTV

ಜಾರಕಿಹೊಳಿ, ಬಿಎಸ್​ವೈ, ಡಿಕೆಶಿ ಫ್ಯಾಮಿಲಿ ಇಲ್ವಾ – ಹೆಚ್ಡಿಕೆ ಪ್ರಶ್ನೆ

ನೆಲಮಂಗಲ: ನಿನ್ನೆ ಮರಿತಬ್ಬೇಗೌಡರ ಮಾತಾಡಿರೋದು ಗಮನಿಸಿದ್ದೇನೆ ಅವರು ಪಕ್ಷಕ್ಕೆ ಬಂದಾಗ ಅಭ್ಯರ್ಥಿ ಮಾಡಲು ಎಷ್ಟು ಹಣ ಸಂದಾಯ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಮಂಗಳವಾರ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿಂದು ಮಾತನಾಡಿದ ಅವರು, ಮರಿತಬ್ಬೇಗೌಡ ಎಷ್ಟು ಜನರಿಗೆ ಕೊಟ್ಟಿದ್ದಾರೆ. ಪಕ್ಷದಿಂದ ಅವರಿಗೆ ಎಷ್ಟು ಕೊಡಲಾಗಿದೆ ಹೀಗೆ ಸತ್ಯ ಹೇಳ್ತಾರಾ(?) ಕ್ಷುಲ್ಲಕ‌ ಹೇಳಿಕೆ ಆ ಭಾಗದ ಜನ ಗಮನಿಸುತ್ತಾರೆ ಎಂದರು.

ಇನ್ನು ಕಾರ್ಯಕರ್ತರಿಂದ ನಿಖಿಲ್, ದೇವೇಗೌಡರು ಸೋತಿದ್ದಾರೆ ಅಂತ ಎಲ್ಲಾದ್ರೂ ಹೇಳಿದ್ದೀನಾ(?) ಇದು ಮುಗಿದ ಅಧ್ಯಾಯ ಇವಗ್ಯಾಕೆ ಮಾತಾಡೋದು ಎಂದು ಹೆಚ್ಡಿಕೆ ಹೇಳಿದರು.

ಸದ್ಯ ಎಷ್ಟು ಕುಟುಂಬದಲ್ಲಿ ಮೂರು ನಾಲ್ಕು ಜನ ಇಲ್ಲ. ನಿಪ್ಪಾಣಿಯಲ್ಲಿ ಏನಾಯ್ತು(?) ಉದಾಸಿ, ಅವರ ಮಗ, ಸತೀಶ್ ಜಾರಕಿಹೊಳಿ ಫ್ಯಾಮಿಲಿ ಇದೆ. ಯಡಿಯೂರಪ್ಪ ಫ್ಯಾಮಿಲಿ ಇದೆ. ಡಿ.ಕೆ ಶಿವಕುಮಾರ್ ಫ್ಯಾಮಿಲಿ ಇಲ್ವಾ(?) ಪ್ರತಿ ಬಾರಿಯೂ ನಮ್ಮ ಕುಟುಂಬದ ಬಗ್ಗೆ ಮಾತಾಡ್ತಾರೆ ಎಂದು ಹೆಚ್ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version