Site icon PowerTV

ಹಾಲಿ ಲವ್ವರ್​ ಮರ್ಡರ್​ ಮಾಜಿ ಪ್ರಿಯಕರ ಅಂದರ್​​

ಬೆಂಗಳೂರು: ಲವ್​ ಸ್ಟೋರಿನಲ್ಲಿ ಹುಡುಗಿಯ ಮಾಜಿ ಲವ್ವರೇ, ಹಾಲಿ ಲವ್ವರ್​ ಪಾಲಿಗೆ ಯಮನಾದ. ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಬ್ರೇಕ್​ ಅಪ್​ ಆದ್ಮೇಲೂ ಬೆನ್ನು ಬಿಡದ ಪಾಗಲ್​ ಪ್ರೇಮಿ, ಹಾಲಿ ಪ್ರಿಯತಮನನ್ನ ಕೊಲೆ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಸಮರ್ಥ್​ನನ್ನು ಪ್ರೀತಿಸುವ 2 ವರ್ಷ ಮೊದಲು ಕಗ್ಗಲಿಪುರದ ನಿವಾಸಿ ಕಿರಣ್​ನನ್ನು ಲವ್​ ಮಾಡಿರುತ್ತಾಳೆ. ಕಿರಣ್​ ಹಾಗೂ ಆಕೆ ಬೆಳ್ಳಂದೂರಿನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಲವ್​ ಶುರುವಾಗಿತ್ತು. ಕಿರಣ್​ ಕುಡಿತಕ್ಕೆ ದಾಸನಾಗಿದ್ದು, ತೀರಾ ಹಿಂಸೆ ಕೊಡುತ್ತಿದ್ದ ಕಾರಣದಿಂದ ಆಕೆ, ಈತನ ಜೊತೆ ಬ್ರೇಕಪ್​ ಮಾಡಿಕೊಂಡಿದ್ದಳು. ಲಾಕ್​ಡೌನ್​ ವೇಳೆ ಆಕೆ ತನ್ನೂರಿಗೆ ಹೋದಾಗ ಅಲ್ಲಿ ಶಾಹಿ ಗಾರ್ಮೆಂಟ್ಸ್​ನಲ್ಲಿ ಕೆಲಸಕ್ಕೆ ಸೇರುತ್ತಾಳೆ. ಅಲ್ಲಿ ಸಮರ್ಥ್ ಪರಿಚಯವಾಗಿ ಅದು ಪ್ರೀತಿಗೆ ತಿರುಗುತ್ತದೆ.

ಕಳೆದ 7ರಂದು ಪ್ರೇಯಸಿ ಸಮರ್ಥ್​ಗೆ ಕರೆ ಮಾಡಿ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಪ್ರೇಯಸಿಯ ಕಚೇರಿ ಬಳಿ ಸಮರ್ಥ್​ ಹೋಗುವುದನ್ನು ನೋಡಿದ ಕಿರಣ್​, ರಾತ್ರಿ 10ಕ್ಕೆ ತನ್ನ ಸ್ನೇಹಿತರಾದ ರಾಕೇಶ್​ ಹಾಗೂ ಅರುಣ್​ ಜೊತೆ ಬಂದು ಹಲ್ಲೆ ಮಾಡುತ್ತಾರೆ. ತಕ್ಷಣ ಸಮರ್ಥ್​ನನ್ನು ಆಸ್ಪತ್ರೆ ಸೇರಿಸಿದರೂ, ಸ್ಥಿತಿ ಗಂಭೀರವಾಗಿತ್ತು. ತಲೆಯ ಒಳಗೆ ಆದ ರಕ್ತಸ್ರಾವದಿಂದ ಸಮರ್ಥ್​ ಕೊನೆಯುಸಿರೆಳೆದಿದ್ದಾನೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಿರಣ್​, ಅರುಣ್​ ಹಾಗೂ ರಾಕೇಶ್​ನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಒಂದು ಗಂಡಿಗೆ ಒಂದು ಹೆಣ್ಣು ಇದ್ದೆ ಇರ್ತಾಳೆ ಅನ್ಕೊಂಡು ಕೈ ಬಿಟ್ಟು ಹೋದ ಹುಡುಗಿಯನ್ನ ಅವಳ ಪಾಡಿಗೆ ಬಿಟ್ಟಿದ್ದರೆ, ತನ್ನದಲ್ಲದ ತಪ್ಪಿಗೆ ಸಮರ್ಥ್ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯೋ ಸಂದರ್ಭನೂ ಬರ್ತಿರ್ಲಿಲ್ಲ.

Exit mobile version