Site icon PowerTV

ಹಾಸನದಲ್ಲಿ ಅಕ್ರಮ ಪಡಿತರ ದಂಧೆ ಬಯಲು

ಹಾಸನ : ಪೊಲೀಸರ ಕಾರ್ಯಾಚರಣೆಯಿಂದ ಬೃಹತ್ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಪಡಿತರ ಜಾಲ ನಗರದ ಹಳೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪತ್ತೆಯಾಗಿದೆ.

ಬಡವರಿಗೆ ವಿತರಣೆ ಆಗಬೇಕಿದ್ದ 471 ಚೀಲ ಅಕ್ರಮ ದಾಸ್ತಾನನನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ, ಅಕ್ರಮವಾಗಿ ತಂದು ಖಾಸಗಿ ಗೊಡೌನ್ ನಲ್ಲಿ ದಾಸ್ತಾನು ಮಾಡೋ ವೇಳೆ ಹಾಸನ ಡಿಸಿಐಬಿ ಪೊಲೀಸರು ದಾಳಿ ಮಾಡಿದ್ದಾರೆ.

ಭದ್ರಾವತಿ ಮೂಲದ ಲಾರಿಯಾಗಿದ್ದು ಚಾಲಕನ ಸಮೇತ ಲಾರಿ ಹಾಗು 471 ಚೀಲ ಅಕ್ರಮ ಪಡಿತರವನ್ನ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಪಂಜಾಬ್ ನಿಂದ ಕರ್ನಾಟಕಕ್ಕೆ ಸಾಗಿಸಿರುವ ಅಕ್ರಮ ದಾಸ್ತಾನು ಪತ್ತೆ ಮಾಡಿ ಕೇಸ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version