Site icon PowerTV

ರಸ್ತೆ ಅಪಘಾತ : ಸ್ಥಳದಲ್ಲೇ ಇಬ್ಬರ ದುರ್ಮರಣ

ತುಮಕೂರು : ನಸುಕಿನ ಜಾವದಲ್ಲಿ ಕಾರು ಹಾಗೂ ಟಿಟಿ ವಾಹನದ ನಡುವೆ ಅಪಘಾತವಾಗಿದ್ದು, ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೇಗೂರು ಬೈಪಾಸ್ ಬಳಿ ನಡೆದಿದೆ.

ರಘು(೨೭) ಸಂತೋಷ (೨೧) ಕಾರಿನಲ್ಲಿದ್ದ ಇಬ್ಬರು ಮೃತಪಟ್ಟ ದುರ್ದೈವಿಗಳಾಗಿದ್ದು, ಇನ್ನೋರ್ವ ವಿಜಯ್ (೩೦) ಎಂಬುವವರ ಸ್ಥಿತಿ ಗಂಭೀರವಾಗಿದೆ. ಟಿಟಿ ವಾಹನದಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚಿಕ್ಕಮಗಳೂರಿನಿಂದ- ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಕಾರಿಗೆ, ಧರ್ಮಸ್ಥಳಕ್ಕೆ ಹೋಗುತಿದ್ದಕ್ಕೆ ಟಿ ಟಿ ವಾಹನವು ಡಿವೈಡರ್ ದಾಟಿ ಡಿಕ್ಕಿ ಹೊಡೆದಿದೆ. ಮೃತರು ಬೆಂಗಳೂರಿನ ಸಂಜಯ್ ನಗರದ ವಾಸಿಗಳಾಗಿದ್ದಾರೆ.

ಘಟನೆಗೆ ಸಂಬಂಧಿಸಿ ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version