Site icon PowerTV

ಅಪ್ಪು ಭಾವಚಿತ್ರದ ಸಮ್ಮುಖದಲ್ಲಿ ಮದುವೆಯಾದ ನವ ಜೋಡಿ

ವಿಜಯಪುರ: ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್​ ಪೋಟೋ ಸಮ್ಮುಖದಲ್ಲಿ ಮದುವೆ ಆದ ಘಟನೆಯೊಂದು ವಿಜಯಪುರ ನಗರದಲ್ಲಿರುವ ಕಾಳಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದಿದೆ.

ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಅಪ್ಪು ಅಭಿಮಾನಿಗಳಿದ್ದಾರೆ ಈ ಸಾಲಿನಲ್ಲಿರುವ ಅಭಿಮಾನಿಯೊಬ್ಬರು ಬಸವರಾಜ್​ ಕಕ್ಕಳಮೇಲಿ. ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕು ಎಂದು ಕನಸು ಕಂಡಿದ್ದ. ಆದರೆ, ಅಪ್ಪು ಇಲ್ಲದ ಕಾರಣ ಅವರ ಪೋಟೋಗಳನ್ನು ವೇದಿಕೆ ಮೇಲೆ ಇಟ್ಟು ಮಾಂಗಲ್ಯಧಾರಣೆ ಮಾಡಿಕೊಂಡಿದ್ದಾರೆ.

ಅದುವಲ್ಲದೇ, ಪುನೀತ್ ಸಮಾಧಿ ಬಳಿ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಮಾಡಿ ನಂತರ ಎಲ್ಲರಿಗೆ ನೀಡಿದ್ದಾನೆ. ಪುನೀತ್ ರಾಜಕುಮಾರ ಎಲ್ಲಾ ಚಿತ್ರಗಳನ್ನು ಫಸ್ಟ್ ಶೋದಲ್ಲಿ ವೀಕ್ಷಣೆ ಮಾಡಿರೋ ಬಸವರಾಜ್​ ಕಕ್ಕಳಮೇಲಿ. ಪುನೀತ್ ಮೇಲಿನ ಬಸವರಾಜ ಅಭಿಮಾನಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version