Site icon PowerTV

10 ಕೋಟಿಗೆ ‘ವಿಕ್ರಾಂತ್‌ ರೋಣ’ ಸೇಲ್‌

ಇತ್ತೀಚಿಗೆ ಕನ್ನಡ ಸಿನೆಮಾಗಳು ವರ್ಲ್ಡ್​ ವೈಡ್​ ಹೆಸರು ಗಳಿಸುತ್ತಿವೆ. ದೊಡ್ಡ ದೊಡ್ಡ ಸಿನೆಮಾಗಳು ವಿದೇಶಗಳಲ್ಲೂ ಸಹ ಸೌಂಡ್​ ಮಾಡುತ್ತಿವೆ. ನಟ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ವಿದೇಶಿ ಮಾರುಕಟ್ಟೆಯಲ್ಲಿ ಆಗಲೇ ಸದ್ದು ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಓವರ್‌ ಸೀಸ್‌ನಲ್ಲಿ ಈ ಚಿತ್ರದ ವಿತರಣೆ ಹಕ್ಕುಗಳು 10 ಕೋಟಿಗೆ ಮಾರಾಟಗೊಂಡಿವೆ.

ಇನ್ನು ಕನ್ನಡ ಚಿತ್ರವೊಂದು ಬಿಡುಗಡೆ ಆಗುವ ಮುನ್ನವೇ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟಗೊಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬುದು ಚಿತ್ರತಂಡದ ಉತ್ಸಾಹದ ಮಾತು. ವಿದೇಶದಲ್ಲಿ ಚಿತ್ರದ ಹಕ್ಕುಗಳನ್ನು ಒನ್‌ ಟ್ವೆಂಟಿ 8 ಮೀಡಿಯಾ ಹೆಸರಿನ ಸಂಸ್ಥೆ ತನ್ನದಾಗಿಸಿಕೊಂಡಿದೆ. 3ಡಿ ತಂತ್ರಜ್ಞಾನದಲ್ಲಿ ಜುಲೈ 28ರಂದು ದೇಶ- ವಿದೇಶಗಳಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾ ಬಿಡುಗಡೆ ಆಗುತ್ತಿದೆ.

Exit mobile version