Site icon PowerTV

ಪ್ರೀತ್ಸು ಎಂದು ಹಿಂದೆ ಬಿದ್ದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಶಿವಮೊಗ್ಗ : ಪ್ರೀತಿ ಮಾಡು ಎಂದು ಹಿಂದೆ ಬಿದ್ದಿದ್ದ ಪಕ್ಕದ ಮನೆಯವನ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ವಸವೆ ಗ್ರಾಮದಲ್ಲಿ ನಡೆದಿದೆ.

ವಿದ್ಯಾಶ್ರೀ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ವಸವೆ ಗ್ರಾಮದ ಕುಂಟಿಗೆಯ ಪಟೇಲ್ ಈಶ್ವರಪ್ಪ ಗೌಡ ಎಂಬುವವರ ಪುತ್ರಿಯಾಗಿದ್ದು, ಸಾಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.

ಶಶಾಂಕ್ ಎಂಬ ಹುಡುಗ ಇವರು ಪ್ರತಿ ನಿತ್ಯ ಕಾಲೇಜಿಗೆ ತೆರಳುವ ವೇಳೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ . ಹುಡುಗಿ ಎಷ್ಟೇ  ಇಷ್ಟವಿಲ್ಲ ಎಂದರು ಕೇಳದೆ ದಿನಾಲೂ ಪೀಡಿಸುತ್ತಿದ್ದ. ಈತನ ಕಿರುಕುಳಕ್ಕೆ ಬೇಸತ್ತು ಏಪ್ರಿಲ್ 19 ರಂದು ವಿಷ ಸೇವಿಸಿದ್ದರು. ತಕ್ಷಣ ಮಣಿಪಾಲಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾರೆ.

ಇನ್ನು ಶಶಾಂಕ್​​ನನ್ನ ಬಂಧಿಸುವಂತೆ ವಿದ್ಯಾಶ್ರೀ ಸಹೋದರ ರಕ್ಷಿತ್​​ನಿಂದ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Exit mobile version