Site icon PowerTV

ಎದುರಾಳಿ ರೌಡಿಶೀಟರ್ ಮಹೇಂದ್ರ ಶೆಟ್ಟಿ ಸಹಚರರ ಬಂಧನ..!

ಮಂಗಳೂರು : ಕಳೆದ ಒಂದು ವಾರದ ಹಿಂದೆ ಮಂಗಳೂರಿನ ರೌಡಿಶೀಟರ್ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ ನ ಕೊಲೆಯಾಗಿತ್ತು. ನಗರದ ಎಮ್ಮೆಕೆರೆ ಪಬ್ಲಿಕ್ ಗ್ರೌಂಡ್ ನಲ್ಲಿ ರಾಹುಲ್ ನ ಕೊಲೆಗೈದಿದ್ದ ಎದುರಾಳಿ ತಂಡ,ಬಳಿಕ ಮೃತದೇಹವನ್ನ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಎಳೆದು ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದರು.

ಅದುವಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ತಡರಾತ್ರಿ ಮಂಗಳೂರು ಪೊಲೀಸರು ಆರು ಜನರನ್ನ ಬಂಧಿಸಿದ್ದಾರೆ.ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್,ಸುಶಿತ್,ದಿಲ್ಲೇಶ್ ಬಂಗೇರ,ಶುಭಂ ಮತ್ತು ವಿಷ್ಣು ಬಂಧಿತ ಆರೋಪಿಗಳು.ಇನ್ನೂ ಈ ಕೊಲೆ ಜನವಸತಿ ಪ್ರದೇಶದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಕೂಡ ಉಂಟು ಮಾಡಿತ್ತು.

ಇನ್ನೂ ಈ ಕೊಲೆಗೆ ರೌಡಿಶೀಟರ್ ಮಹೇಂದ್ರ ಶೆಟ್ಟಿ ಮತ್ತು ಕಕ್ಕೆ ರಾಹುಲ್ ನಡುವಿನ ಹಳೆ ವೈಷಮ್ಯವೇ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಬಂಧಿತ ಆರೋಪಿಗಳಿಂದ‌ ಕೃತ್ಯಕ್ಕೆ ಬಳಸಿದ ಮೂರು ತಲವಾರು,ನಾಲ್ಕು ಕತ್ತಿ,ಮೂರು ಚೂರಿ ಮತ್ತು ಎರಡು ಸ್ಕೂಟರ್, ಒಂದು ರಾಯನ್ ಎನ್ ಪಿಲ್ಡ್ ಬೈಕ್ ಮತ್ತು ಐದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.ಬಂಧಿತರು ಎಲ್ಲರೂ ಕ್ರಿಮಿನಲ್ ಬ್ಯಾ ಗ್ರೌಂಡ್ ಉಳ್ಳವರಾಗಿದ್ದು, ನಗರದಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಇದ್ದರೂ ಎಂದು ತಿಳಿದು ಬಂದಿದೆ.ಈ‌ ಪ್ರಕರಣದಲ್ಲಿ ಇನ್ನೂ 8 ಜನರ ಕೈವಾಡ ಇದ್ದು ಉಳಿದವರ ಬಂಧನಕ್ಕೆ ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ.

Exit mobile version