Site icon PowerTV

ವಿಷ ಬೀಜ ಬಿತ್ತುವ ಕೆಲಸ ಸರಿಯಲ್ಲ :ಕಾಂಗ್ರೆಸ್ ಮುಖಂಡ ಅಸಮಾಧಾನ

ಹುಬ್ಬಳ್ಳಿ : ಒಂದು ಧರ್ಮದ ವಿರುದ್ಧ ಸುಪ್ರಭಾತ ಅಭಿಯಾನ ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಸಾಮಾಜಿಕ ಕಾರ್ಯಕರ್ತರ ಅಶ್ಪಾಕ್ ಕುಮಟಾಕರ ಹೇಳಿದ್ದಾರೆ.

ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಶ್ರೀರಾಮ್ ಸೇನೆ ಕೈಗೊಂಡಿರುವ ಸುಪ್ರಭಾತ ಅಭಿಯಾನವನ್ನ ಸ್ವಾಗತಿಸುತ್ತೇನೆ. ಆದರೆ, ಒಂದು ಧರ್ಮದ ವಿರುದ್ಧ ತಪ್ಪು. ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ . ಧರ್ಮ ಧರ್ಮಗಳ ನಡುವೆ ಒಡಕನ್ನು ಉಂಟುಮಾಡಬಾರದು ಎಂದಿದ್ದಾರೆ.

ಇನ್ನು ಇದರಿಂದ ದೇಶಕ್ಕೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ, ಇದು ಸರಿಯಲ್ಲ ಎಂದು ಅಸಮಾಧಾನ ತೋರಿದರು. ದೇವಸ್ಥಾನದಲ್ಲಿ  ಹನುಮಾನ್ ಚಾಲಿಸ್​​, ಸುಪ್ರಭಾತ, ಹಚ್ಚುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಹಿಂದೂ ಮುಸ್ಲಿಂರು  ಅಣ್ಣ ತಮ್ಮಂದಿರ  ಹಾಗೆ ಬಾಳೋನ  ಸಹ ಬಾಳ್ವೆ ಜೀವನ ನಡೆಸೋಣ ಎಂದು ವಿಡಿಯೋ ಮೂಲಕ ಮನವಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

Exit mobile version